Wednesday, August 10, 2022

Latest Posts

ಪ್ರಕೃತಿ ಆರಾಧನೆಯ ನಾಡಿನಲ್ಲಿ ‘ಕೈಲ್ ಪೊಳ್ದ್’ ಸಂಭ್ರಮ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ,ಮಡಿಕೇರಿ:

ಪ್ರಕೃತಿ ಆರಾಧನೆಯ ನಾಡು ಕೊಡಗು ಜಿಲ್ಲೆಯಲ್ಲಿ ಆಯುಧ ಪೂಜೆ ಎಂದೇ ಕರೆಯಲ್ಪಡುವ ‘ಕೈಲ್ ಪೊಳ್ದ್’ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಗ್ರಾಮೀಣ ಭಾಗದಲ್ಲಿ ಮುಂಗಾರು ಮಳೆಯಲ್ಲಿ ನಾಟಿ ಕಾರ್ಯ ಸೇರಿದಂತೆ ಕೃಷಿ ಚಟುವಟಿಕೆಗಳನ್ನು ಪೂರ್ಣಗೊಳಿಸಿ ಕೃಷಿ ಪರಿಕರಗಳಿಗೆ ಕೃತಜ್ಞತಾ ಭಾವದಿಂದ ಪೂಜೆ ಸಲ್ಲಿಸುವ ಹಬ್ಬಕ್ಕೆ ಕೊಡಗು ಸಾಕ್ಷಿಯಾಯಿತು.
ಚೆಟ್ಟಳ್ಳಿಯ ಪುತ್ತರಿರ ಕುಟುಂಬದ ಐನ್‌ಮನೆಯಲ್ಲಿ ‘ಕೈಲ್ ಪೊಳ್ದ್’ ಸಂಪ್ರದಾಯಬದ್ಧವಾಗಿ ನಡೆಯಿತು.
ಕುಟುಂಬದ ಸದಸ್ಯರು ಹಾಗೂ ಮಕ್ಕಳು ಐನ್‌ಮನೆಯ ನೆಲ್ಲಕ್ಕಿನಡುಬಾಡೆಯಲ್ಲಿ ದೇವರ ದೀಪಕ್ಕೆ ನಮಸ್ಕರಿಸಿ ಹಿರಿಯರ ಆಶೀರ್ವಾದ ಪಡೆದರು. ಸಾಂಪ್ರದಾಯಿಕ ಆಯುಧಗಳಾದ ಕೋವಿ ಮತ್ತು ಒಡಿಕತ್ತಿಗೆ ವಿಶೇಷ ತೋಕ್ ಪೂಗಳಿಂದ ಅಲಂಕರಿಸಿ, ಗಂಧವನ್ನಿಟ್ಟು ಹಬ್ಬದ ಖಾದ್ಯಗಳೊಂದಿಗೆ ಪೂಜೆ ಸಲ್ಲಿಸಿದರು.
ಕುಟುಂಬದ ಹಿರಿಯರಾದ ಪುತ್ತರಿರ ಟುಟ್ಟು ಕಾರ್ಯಪ್ಪ ಅವರು ಸಾಂಪ್ರದಾಯಿಕ ಪೂಜೆ ಸಲ್ಲಿಸಿ ಕುಟಂಬ ಮತ್ತು ಊರಿನ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ನಂತರ ಕೊಡಗಿನ ವಿಶೇಷ ಖಾದ್ಯಗಳೊಂದಿಗೆ ಸಹಭೋಜನ ನಡೆಯಿತು. ಮಧ್ಯಾಹ್ನ ಕುಟುಂಬದ ಸದಸ್ಯರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಊರು ಮಂದ್ ನಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಕೊಡಗಿನ ಸಾಂಪ್ರದಾಯಿಕ ವಾಲಗಕ್ಕೆ ಹೆಜ್ಜೆ ಹಾಕಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss