ಹೊಸದಿಗಂತ ವರದಿ ಅಂಕೋಲಾ:
ಕೂಲಿ ಕಾರ್ಮಿಕನೋರ್ವ ಆಕಸ್ಮಿಕವಾಗಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ತಾಲೂಕಿನ ಅಗ್ರಗೋಣದಲ್ಲಿ ನಡೆದಿದೆ.
ಹೆಗ್ರೆ ನಿವಾಸಿ ಶಿವರಾಜ ಗಿರೀಶ್ ಪೂಜಾರಿ(39) ಮೃತ ವ್ಯಕ್ತಿಯಾಗಿದ್ದು ಬಂಕಿಕೊಡ್ಲದಲ್ಲಿ ರಾತ್ರಿ ನಡೆದ ಯಕ್ಷಗಾನಕ್ಕೆ ಹೋಗಿದ್ದ ಈತ ಬೆಳಿಗ್ಗೆ 5.30ಗಂಟೆಗೆ ಮನೆಗೆ ಬಂದು ಮಲಗಿದವನು 9.30 ಗಂಟೆಗೆ ಎದ್ದು ಅಗ್ರಗೋಣದ ರಾಜು ಸೀತಾರಾಮ ನಾಯಕ ಎನ್ನುವವರ ಗದ್ದೆಯಲ್ಲಿ ತಂತಿ ಬೇಲಿ ಕಟ್ಟುವ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ತಂತಿ ಬೇಲಿ ಕಾಲಿಗೆ ಸಿಲುಕಿ ಆಯತಪ್ಟಿ ಬಾವಿಯಲ್ಲಿ ಬಿದ್ದಿರುವುದಾಗಿ ತಿಳಿದು ಬಂದಿದೆ.
ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬಾವಿಯಲ್ಲಿ ತೇಲುತ್ತಿದ್ದ ಮೃತ ದೇಹವನ್ನು ಮೇಲಕ್ಕೆ ಎತ್ತಿದ್ದು ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.