spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಲಡಾಖ್ ಗಡಿ ರಕ್ಷಣೆಗೀಗ ‘ಮೇಕ್ ಇನ್ ಇಂಡಿಯಾ’ ಡ್ರೋನ್ ಗಳು

- Advertisement -Nitte

ಪ್ರೀತಿಯ ಓದುಗರೇ,

ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.

…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ದೇಶೀಯ ನವೋದ್ದಿಮೆಯೊಂದರ ಜತೆ ಭಾರತೀಯ ಸೇನೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ಆ ಪ್ರಕಾರ ಲಡಾಖ್ ಗಡಿಯ ನಭವನ್ನು ಡ್ರೋನ್ ಗಳು ಮುತ್ತಿಕ್ಕಲಿವೆ. ಮಿಲಿಟರಿ ದಾಳಿ ಮತ್ತು ದುರ್ಗಮ ಪ್ರದೇಶಗಳಿಗೆ ವಸ್ತುಗಳ ಪೂರೈಕೆ ಎರಡೂ ಕಾರ್ಯಗಳನ್ನು ಈ ಡ್ರೋನ್ ಗಳು ನಿಭಾಯಿಸಲಿದ್ದು, ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ಇದು ಬಹುಮುಖ್ಯ ಸೇರ್ಪಡೆಯಾಗಲಿದೆ. ಎಂ ಆರ್-20 ಎಂದು ಕರೆಸಿಕೊಳ್ಳುವ ಡ್ರೋನ್ ಗಳು ಅದಾಗಲೇ ಲೇಹ್ ನಲ್ಲಿ ಪರೀಕ್ಷಾರ್ಥ ಹಾರಾಟಗಳನ್ನು ನಡೆಸಿವೆ ಎಂದು ರಕ್ಷಣಾ ವಿಷಯಗಳ ವರದಿಗೆ ಮೀಸಲಾಗಿರುವ ಲೈವ್ ಫಿಸ್ಟ್ ಜಾಲತಾಣ ವರದಿ ಮಾಡಿದೆ. 

ಎಲೆಕ್ಟಾನಿಕ್ ಮಾದರಿಯಲ್ಲಿ ಶಸ್ತ್ರಗಳನ್ನು ಉಪಯೋಗಿಸಿ ಯುದ್ಧ ಮಾಡಬಲ್ಲ ಸಾಮರ್ಥ್ಯದ ಡ್ರೋನ್ ಗಳನ್ನು ಬೆಂಗಳೂರು ಮೂಲದ ನ್ಯೂಸ್ಪೇಸ್ ಎಂಬ ಸ್ಟಾರ್ಟ್ ಅಪ್ ಭಾರತೀಯ ಸೇನೆಗೆ ಒದಗಿಸಲಿದೆ. ಇನ್ನು, ಲಡಾಖ್ ನಂಥ ದುರ್ಗಮ ಪ್ರದೇಶಗಳಿಗೆ ಪೂರೈಕೆಗಳನ್ನು ಹೊತ್ತು ತಲುಪಬಲ್ಲ ಡ್ರೋನ್ ಗಳಿಗಾಗಿ ನೋಯ್ಡಾ ಮೂಲದ ರ್ಯಾಫ್ ಎಂಫಿಬರ್ (Raph Mphibr) ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮೂಲಕ ಭಾರತವು ಗಡಿಯಲ್ಲಿರುವ ಆತಂಕವನ್ನು ಸಶಕ್ತವಾಗಿ ಎದುರಿಸುವ ಸಾಮರ್ಥ್ಯ ವೃದ್ಧಿಸಿಕೊಂಡಿರುವುದರ ಜತೆಗೆ ಈ ಇಡೀ ಪ್ರಕ್ರಿಯೆ ‘ಮೇಕ್ ಇನ್ ಇಂಡಿಯಾ’ ಆಗಿರುವುದು ವಿಶೇಷ. 

ಏನಿವುಗಳ ಮಹತ್ವ

ಭಾರತೀಯ ಸೇನೆ ಪಡೆಯಲಿರುವ ದಾಳಿ ಸಾಮರ್ಥ್ಯದ ಡ್ರೋನ್ ಗಳ ಬಗ್ಗೆ ಮಾತನಾಡುವುದಾದರೆ ಇವು ಹುಡುಕಿ, ಸುತ್ತುವರೆದು ಗುರಿಯನ್ನು ಉಡಾಯಿಸಬಲ್ಲ ಡ್ರೋನ್ ಗಳು. ಇವುಗಳ ಪರೀಕ್ಷೆ ಅದಾಗಲೇ ಯಶಗೊಂಡಿದ್ದು, ಇವುಗಳ ಪೂರೈಕೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದು ಟ್ಯಾಂಕರುಗಳು ಸೇರಿದಂತೆ ಹಲವು ಗುರಿಗಳ ಮೇಲೆ ದಾಳಿ ಮಾಡಬಲ್ಲುದಾಗಿದೆ. ಇಲ್ಲಿ ಸೈನಿಕರನ್ನು ಕಳೆದುಕೊಳ್ಳುವ ಭಯವಿಲ್ಲ.

ಇನ್ನು, ಪೂರೈಕೆಗಳನ್ನು ನಿಭಾಯಿಸುವ ಹಂತದಲ್ಲಿ ಲಡಾಖ್ ನಂಥ ಅತಿ ಎತ್ತರ ಹಾಗೂ ದುರ್ಗಮ ಪ್ರದೇಶಗಳಲ್ಲಿ ಡ್ರೋನ್ ಗಳ ಪಾತ್ರ ಬಹಳ ಮಹತ್ವದ್ದು. ವಾತಾವರಣದ ಕಾರಣದಿಂದ ಹೆಲಿಕಾಪ್ಟರುಗಳಲ್ಲಿ ಪೂರೈಕೆಗಳನ್ನು ಮುಟ್ಟಿಸುವುದು ಹಲವು ಬಾರಿ ವಿಳಂಬವಾಗುತ್ತದೆ. ಹೀಗೆ ಪೂರೈಕೆ ತಲುಪಿಸುವುದಕ್ಕೆ ಕಡಿದಾದ ಅತಿ ಎತ್ತರದ ಬೆಟ್ಟಗಳ ನಡುವೆ ಸಾಗಿದ ಹೆಲಿಕಾಪ್ಟರುಗಳು ಅಫಘಾತಕ್ಕೀಡಾಗಿ ಯೋಧರ ಜೀವನಷ್ಟವಾದ ಉದಾಹರಣೆಗಳೂ ಇವೆ. ಇವೆಲ್ಲ ಸಂಕಷ್ಟಗಳನ್ನು ಡ್ರೋನ್ ಪರಿಹರಿಸುತ್ತದೆ. ಇಂಡಿಯಾ ಟುಡೆ ವರದಿ ಮಾಡಿರುವ ಪ್ರಕಾರ ಪ್ರತಿ ಡ್ರೋನುಗಳು 20 ಕೆಜಿ ಭಾರ ಹೊರಬಲ್ಲವು. ಆಮ್ಲಜನಕಕ್ಕೂ ತತ್ವಾರವಾಗಿರುವ ಪ್ರದೇಶಗಳಲ್ಲಿ 20 ಕೆಜಿ ಬಹಳ ದೊಡ್ಡ ಪ್ರಮಾಣ. ದುರ್ಗಮ ಪ್ರದೇಶಗಳಲ್ಲಿರುವ ಯೋಧರಿಗೆ ಆಹಾರ, ಔಷಧದಂಥ ಅಗತ್ಯ ವಸ್ತುಗಳನ್ನು ತಲುಪಿಸುವುದರಲ್ಲಿ ಇವು ಸೇವೆ ನೀಡಲಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss