Friday, July 1, 2022

Latest Posts

ಕೇಂದ್ರ ಸಚಿವರ ಮಗನಿಗೆ ವಿಚಾರಣೆಗೆ ಬುಲಾವ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪಟ್ಟಿಯಲ್ಲಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ’ರನ್ನು ವಿಚಾರಣೆಗೆ ಹಾಜರಾಗುವಂತೆ ಜಿಲ್ಲಾ ಮೀಸಲು ಪೊಲೀಸರು ಸಮನ್ಸ್ ನೀಡಿದ್ದಾರೆ.
ಪೊಲೀಸರ ಆರೋಪಿಗಳ ಪಟ್ಟಿಯಲ್ಲಿರುವ ಏಕೈಕ ಆರೋಪಿ ಆಶಿಶ್ ಅಲಿಯಾಸ್ ಮೋನು.
ಆಶಿಶ್ ಮಿಶ್ರಾ ಹಾಗೂ ಅವರ ಇಬ್ಬರು ಸಹವರ್ತಿಗಳಾದ ಆಶಿಶ್ ಪಾಂಡೆ ಮತ್ತು ಲುವಕುಶ್ ರಾಣಾರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಭಾನುವಾರ ಲಖಿಂಪುರ್ ಖೇರಿಯಲ್ಲಿ ನಡೆದ ದುರ್ಘಟನೆಯಲ್ಲಿ ನಾಲ್ವರು ರೈತರು ಮೃತಪಟ್ಟಿದ್ದು, ಅಜಯ್ ಮಿಶ್ರಾ ಅವರ ಮಾಲೀಕತ್ವದ ಎಸ್ ಯುವಿ ಕಾರು ಸೇರಿದಂತೆ ಮೂರು ಕಾರುಗಳು ರೈತರ ಮೇಲೆ ಹಾರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss