Friday, October 7, 2022

Latest Posts

ಬ್ಯಾಡ್ಮಿಂಟನ್‌ ನಲ್ಲಿ ಮತ್ತೊಂದು ಚಿನ್ನ ಗೆದ್ದ ಲಕ್ಷ್ಯ ಸೇನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಭಾರತ ಸ್ಟಾರ್‌ ಆಟಗಾರ್ತಿ ಪಿ ವಿ ಸಿಂಧು ಬ್ಯಾಡ್ಮಿಂಟನ್‌ ನಲ್ಲಿ ಚಿನ್ನ ಗೆದ್ದ ಬೆನ್ನಲ್ಲೇ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಲಕ್ಷ್ಯ ಸೇನ್‌ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್‌ಲ್ಲಿ 20 ವರ್ಷದ ಲಕ್ಷ್ಯ ಸೇನ್ ಅವರು ಮಲೇಷ್ಯಾದ ಎನ್‌ಜಿ ತ್ಜೆ ಯೋಂಗ್ ವಿರುದ್ಧ ಅಂತಿಮ ಸೆಣಸಾಟ ನಡೆಸಿ ವಿಜಯಶಾಲಿಯಾಗಿದ್ದಾರೆ.

ಲಕ್ಷ್ಯ ಸೇನ್ ಅವರು ಮಲೇಷ್ಯಾದ ಕೆಳ-ಶ್ರೇಯಾಂಕದ Ng Tze Yong ವಿರುದ್ಧ ಕಠಿಣ ಹೋರಾಟದ ನಂತರ 19-21 ರಿಂದ ಆರಂಭಿಕ ಗೇಮ್ ಅನ್ನು ಕಳೆದುಕೊಂಡರು ಆದರೆ ಅವರು ಬರ್ಮಿಂಗ್ಹ್ಯಾಮ್ ಕ್ರೀಡಾಕೂಟದ ಮುಕ್ತಾಯದ ದಿನದಂದು ಭಾರತಕ್ಕೆ ಸ್ಮರಣೀಯ ಚಿನ್ನವನ್ನು ಗೆಲ್ಲುವಲ್ಲಿ ಅಂತಿಮವಾಗಿ ಸಫಲರಾಗಿದ್ದಾರೆ. ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಷಟ್ಲರ್ 19-21, 21-9, 21-16 ರಿಂದ ತೀವ್ರ ಹೋರಾಟ ನಡೆಸಿ ಸ್ವರ್ಣ ಪದಕವನ್ನು ಗೆದ್ದಿದ್ದಾರೆ. ಆಮೂಲಕ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಸಿಂಗಲ್ಸ್‌ನಲ್ಲಿ ಚಿನ್ನ ಗೆದ್ದ ಭಾರತೀಯ ಪುರುಷರ ಪಟ್ಟಿಯಲ್ಲಿ ಪ್ರಕಾಶ್ ಪಡುಕೋಣೆ (1978), ಪರುಪಳ್ಳಿ ಕಶ್ಯಪ್ (2014) ಮತ್ತು ಸೈಯದ್ ಮೋದಿ (1982) ಮುಂತಾದವರ ಹೆಸರಿನೊಂದಿಗೆ ತಮ್ಮ ಹೆಸರನ್ನೂ ದಾಖಲಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!