ಲಾಲ್ ಹನುಮಾನ್ ಉಪ ನಗರ ಪಥಸಂಚಲನ: ಸಂಘ ಸರ್ವವ್ಯಾಪಿ ಸರ್ವಸ್ಪರ್ಶಿ!

ಹೊಸದಿಗಂತ ವರದಿ ,ಕಲಬುರಗಿ:
ರಾಷ್ಟ್ರೀಯ ಸ್ವಯಂಸೇವಕ ಸಂಘವು ಸತತ 95 ವಷ೯ಗಳಿಂದ ನಿರಂತರವಾಗಿ ಹಾಗೂ ನಿಸ್ವಾರ್ಥ ಮನೋಭಾವದಿಂದ ಸವ೯ವ್ಯಾಪಿಯಾಗಿ ಹಾಗೂ ಸವ೯ಸ್ಪರ್ಶಿಯಾಗಿ ಕಾಯ೯ವನ್ನು ಮಾಡುತ್ತಿದೆ ಎಂದು ಸಂಘಟನಾ ಸಾಮರಸ್ಯ ಗತಿವಿಧಿಯ ಪ್ರಾಂತ ಸಂಯೋಜಕರಾದ ಶಿವಲಿಂಗ ಕುಂಬಾರ ಅಭಿಮತವನ್ನು ವ್ಯಕ್ತಪಡಿಸಿದರು.

ಗುರುವಾರ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಲಾಲ್ ಹನುಮಾನ ಉಪ ನಗರದ ವಾಷಿ೯ಕೋತ್ಸವ ನಿಮಿತ್ತ ಆಯೋಜಿಸಿದ್ದ ಪಥ ಸಂಚಲನ ಕಾಯ೯ಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿ, ಪ್ರತಿಯೊಂದು ಹಿಂದೂವಿನ ಮನೆಯಲ್ಲಿ ಪಾಲಕರು ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ತಿಳಿಸಿ,ರಾಷ್ಟ್ರೀಯ ವಿಚಾರಧಾರೆಗಳನ್ನು ತಿಳಿಯಲು ಪ್ರೇರಣೆ ನೀಡಬೇಕು.ಹಿಂದೂ ಎಂಬುದು ಒಂದು ಜೀವನ ಪದ್ಧತಿ. ಸಂಘವು ಬರೀ ಸಂಘಟನೆಯಾಗದೇ,ಸಮಾಜಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.

ಸಂಘದ ದಿನನಿತ್ಯದ ಶಾಖೆಗಳಲ್ಲಿ ಶಾರೀರಿಕ ಅಭ್ಯಾಸ, ವೈಚಾರಿಕ ಅಭ್ಯಾಸ ಕಲಿಸಲಾಗುತ್ತದೆ.ಸಂಘ ವ್ಯಕ್ತಿ ನಿಮಾ೯ಣದ ಕಾಯ೯ದಲ್ಲಿ ಕೈ ಹಾಕಿದ್ದು,9 ದಶಕಗಳಿಂದ ವ್ಯಕ್ತಿ ನಿಮಾ೯ಣದ ಜೊತೆ ಜೊತೆಗೆ ಬಲಿಷ್ಠ ಸಮಾಜ ನಿಮಾ೯ಣ ಮಾಡುವ ಕೆಲಸವನ್ನು ಮಾಡುತ್ತಿದೆ.ದಿನನಿತ್ಯ ಶಾಖೆಯಲ್ಲಿ ಆಡಿಸುವಂತಹ ಆಟಗಳಿಂದ ಸ್ವಯಂಸೇವಕನು ಗುಣವಂತನಾಗಿ,ಧೈಹಿಕವಾಗಿ ಬೆಳೆಯುತ್ತಾನೆ.

ಕಾಯ೯ಕ್ರಮದ ಅಧ್ಯಕ್ಷತಗಯನ್ನು ವಹಿಸಿದ್ದ ಡಾ.ಶರಣಬಸಪ್ಪಾ ಹಿರಾ ಮಾತನಾಡಿ, ಸಂಸ್ಕಾರಭರಿತ,ವೈಭವಭರಿತ ಭಾರತ ಮಾಡಲು ನಾವೆಲ್ಲರೂ ಸೇರಿ ದೇಶ ಸೇವೆಗೆ ಮುಂದಾಗಬೇಕಿದೆ.ತಂದೆ-ತಾಯಿ ತಮ್ಮ ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡುವ ಮೂಲಕ ಉತ್ತಮ ಪ್ರಜೆಯಾಗುವಲ್ಲಿ ನಿರತರಾಡಿರಬೇಕು ಎಂದು ಹೇಳಿದರು.

ಶಹಾಬಜಾರ ಬಡಾವಣೆಯ ಸುತ್ತಮುತ್ತಲಿನ ವಿವಿಧ ಬಡಾವಣೆಗಳಲ್ಲಿ ಸಂಘದ ಆಕಷ೯ಕ ಪಥ ಸಂಚಲನ ಜರುಗಿತು.ದಾರಿಯುದ್ದಕ್ಕೂ ಮಾತೇಯರು,ಬಂದುಗಳು ಪುಷ್ಪಾರ್ಚನೆ ಮಾಡುವ ಸಂಚಲನಕ್ಕೆ ಸ್ವಾಗತ ಕೋರಿದರು. ಸುಮಾರು 225 ಸ್ವಯಂಸೇವಕರು ಪೂಣ೯ ಗಣವೇಶದೊಂದಿಗೆ ಭಾಗವಹಿಸಿದ್ದರು.

ಶ್ರೇಯಸ್ ಠೋಕೆ ವ್ಯಯಕ್ತೀಕ ಗೀತೆ ಹಾಡಿದರು.ನಿರೂಪಣೆ,ಸ್ವಾಗತ ಭಾಷಣ ರಾಕೇಶ್ತ ಬಿರಾದಾರ, ಮಾಂತಕುಮಾರ ಬಿರಾದಾರ,ವಂದನಾರ್ಪಣೆ ಶರಣರಾಜ ಖೇಳೆಗಾಂವಕರ್ ಮಾಡಿದರು.ನಗರ ಕಾಯ೯ವಾಹ ಮಲ್ಲಿನಾಥ ಅವರಾದಿ,ಚಿದಾನಂದ ಹಿರೇಮಠ, ಯೋಗೇಶ್ ಭಂಡಾರಿ, ಶಾಂತಕುಮಾರ ಬಿರಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!