ಇನ್ನೂ ಜಮೀನು ಮಂಜೂರಾಗದ ಮಾಜಿ ಸೈನಿಕರಿಗೆ ಸಿಗಲಿದೆ ವಸತಿ ನಿವೇಶನ

ಮಡಿಕೇರಿ: ಭೂ ಮಂಜೂರಾತಿ ನಿಯಮ 1969 ರನ್ವಯ ಹಲವಾರು ಮಾಜಿ ಸೈನಿಕರು ಭೂ ಮಂಜೂರಾತಿಗೆ ಅರ್ಹರಿದ್ದು, ಸರಕಾರಿ ಜಮೀನು ಮಂಜೂರು ಮಾಡಲು ಸಾಧ್ಯವಾಗದವರಿಗೆ ರಾಜ್ಯ ಸರಕಾರದ ಯಾವುದಾದರೂ ವಸತಿ ಯೋಜನೆಗಳಡಿ ಉಚಿತವಾಗಿ ನಿವೇಶನ ನೀಡಲು ಸರಕಾರ ಮುಂದಾಗಿದೆ.

ಈ ಸಂಬಂಧ ಸರಕಾರ ಅಧಿಸೂಚನೆ ಹೊರಡಿಸಿದ್ದು, ಅದರನ್ವಯ ಗ್ರಾಮೀಣ ಪ್ರದೇಶದಲ್ಲಿ 2400 ಚದರ ಅಡಿಗಳ ಮತ್ತು ಪಟ್ಟಣ ಪ್ರದೇಶಗಳಲ್ಲಿ 1200 ಚದರ ಅಡಿಗಳ ನಿವೇಶನವನ್ನು ಮಂಜೂರು ಮಾಡಲು ಅವಕಾಶವಿದೆ.

ಪ್ರಸ್ತುತ ಲಭ್ಯವಿರುವ ರಾಜ್ಯ ಸರಕಾರದ ವಸತಿ ಯೋಜನೆಗಳಡಿಯಲ್ಲಿ ಈ ಅಳತೆಯ ನಿವೇಶನಗಳನ್ನು ಮಂಜೂರು ಮಾಡಲು ಅವಕಾಶಗಳಿಲ್ಲದಿದ್ದಲ್ಲಿ, ಇದಕ್ಕಾಗಿಯೇ ವಿಶೇಷ ಯೋಜನೆ ರೂಪಿಸಬೇಕಿದೆ. ಆದ್ದರಿಂದ, ನಿವೇಶನ ಹೊಂದಲು ಬಯಸುವ ಮಾಜಿ ಸೈನಿಕರ ಸಂಖ್ಯೆಯನ್ನು ತಿಳಿದು ಜಿಲ್ಲಾಡಳಿತಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲು, ಅರ್ಹ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಯೊಂದಿಗೆ ಮಾಜಿ ಸೈನಿಕರು ತಮ್ಮ ಮಾಜಿ ಸೈನಿಕರ ಗುರುತಿನ ಚೀಟಿಯನ್ನು ಲಗತ್ತಿಸಿ, ಏಪ್ರಿಲ್ 30 ರೊಳಗೆ ಕಾರ್ಯಾಲಯಕ್ಕೆ ಸಲ್ಲಿಸಬಹುದಾಗಿದೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!