ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಭೂ ಹಗರಣ: ಪ್ರಾದೇಶಿಕ ಆಯುಕ್ತರು, ಕಳಂಕಿತರ ನಡುವೆ ಒಪ್ಪಂದ ಆಗಿದೆ: ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮೈಸೂರು:

ಮೈಸೂರಿನಲ್ಲಿ ನಡೆದಿರುವ ಭೂ ಹಗರಣಕ್ಕೆ ಸಂಬAಧಿಸಿದAತೆ ಮೈಸೂರಿನ ಪ್ರಾದೇಶಿಕ ಆಯುಕ್ತರು ಹಾಗೂ ಕಳಂಕಿತರ ನಡುವೆ ಒಪ್ಪಂದ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದರು.
ಶುಕ್ರವಾರ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ದೊಡ್ಡ ಹೈಡ್ರಾಮ ನಡೆಯಿತು. ಶಾಸಕರು ಧರಣಿ ಕೂತಂತೆ (ಜೆಡಿಎಸ್ ಶಾಸಕ ಸಾ.ರಾ.ಮಹೇಶ್), ಪ್ರಾದೇಶಿಕ ಆಯುಕ್ತರು ಬಂದAತೆ, ಇವರು ಮನವಿ ಕೊಟ್ಟಂತೆ, ಅವರು ಸ್ವೀಕರಿಸಿ ಭರವಸೆ ನೀಡಿದಂತೆ ಹೈಡ್ರಾಮ ನಡೆಯಿತು. ಇದನ್ನೆಲ್ಲ ನೋಡಿದರೆ ಕಳಂಕಿತರನ್ನು ರಕ್ಷಿಸುವ ಕೆಲಸ ಇನ್ನೂ ನಡೆಯುತ್ತಿದೆ ಎಂದು ಕಿಡಿಕಾರಿದರು.
ನಾವು ಕೂಡ ಧರಣಿ, ಚಳವಳಿ ಮಾಡಿದ್ದೇವೆ. ಆಗ ಯಾವುದೇ ಅಧಿಕಾರಿಗೆ ನಾವು ಮನವಿ ಕೊಟ್ಟಾಗ ಅವರು ಮನವಿ ಸ್ವೀಕರಿಸಿ, ಎಲ್ಲವನ್ನೂ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆಂದು ಹೇಳುತ್ತಿದ್ದರಷ್ಟೆ. ಆದರೆ, ಗುರುವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದುರು ಆಗಿದ್ದೇ ಬೇರೆ. ಇಲ್ಲಿ ಸಮಯವನ್ನೇ ಕೊಟ್ಟುಬಿಟ್ಟರು, ತನಿಖೆಗೆ ಸಮಿತಿಯನ್ನು ಸ್ಥಳದಲ್ಲೇ ರಚಿಸಿಬಿಟ್ಟರು. ಪ್ರಾದೇಶಿಕ ಆಯುಕ್ತರ ಆಡಳಿತದ ವೇಗಕ್ಕೆ ಜಿಲ್ಲೆಯೇ ಬೆಚ್ಚಿಬಿದ್ದಿದೆ. ಆಯುಕ್ತರು ತುಂಬಾ ವೇಗದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ಎಲ್ಲಾ ನಾಟಕಗಳನ್ನು ನೋಡುತ್ತಿದ್ದರೆ, ಭೂ ಹಗರಣ ಪ್ರಕರಣವನ್ನು ಹಳ್ಳ ಹಿಡಿಸಿ, ಈ ಹಿಂದೆ ಇದ್ದ ಜಿಲ್ಲಾಧಿಕಾರಿ (ರೋಹಿಣಿ ಸಿಂಧೂರಿ) ಹೇಳಿದ್ದೆಲ್ಲ ಸುಳ್ಳು, ನಾವು ಹೇಳಿದ್ದೇ ಸತ್ಯ ಎಂಬುದನ್ನು ಬಿಂಬಿಸಲು ಹೀಗೆ ಮಾಡುತ್ತಿದ್ದಾರೆ. ಪ್ರಾದೇಶಿಕ ಆಯುಕ್ತರು ಹಾಗೂ ಕಳಂಕಿತರ ನಡುವೆ ಒಪ್ಪಂದ ಆದಂತೆ ಕಾಣುತ್ತಿದೆ. ಎಲ್ಲವನ್ನೂ ಹಿಂದೆಯೇ ಚರ್ಚಿಸಿ ತೀರ್ಮಾನ ಕೈಗೊಂಡAತಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ ಅವರೇನು ವರದಿ ಕೊಡಬಹುದು ಎಂಬುದು ಗೊತ್ತಾಗುತ್ತಿದೆ. ಈಗಾಗಲೇ ವರದಿ ತಯಾರಾಗಿದ್ದು, ಸೋಮವಾರ ಕೊಡುತ್ತಾರೆ. ಪ್ರಾದೇಶಿಕ ಆಯುಕ್ತರು ನೀಡುವ ವರದಿಗೆ ಯಾವುದೇ ಬೆಲೆ ಇಲ್ಲ ಎಂದರು.
ನೀವು ನಿಮ್ಮ ಭವನವನ್ನು ಎಷ್ಟು ಎಕರೆಯಲ್ಲಿ ಕಟ್ಟಿದ್ದೀರಿ, ನಿಮಗೆ ಮಂಜೂರಾಗಿದ್ದೆಷ್ಟು, ಮುಡಾ ಭೂಮಿ ಎಷ್ಟು ಒತ್ತುವರಿಯಾಗಿದೆ ಎಂದು ಕೇಳಿದ್ದಾರೆ. ಆದರೆ, ನೀವು ಎಲ್ಲವನ್ನೂ ಬಿಟ್ಟು ರಾಜಕಾಲುವೆ ಬಗ್ಗೆ ಮಾತನಾಡುತ್ತಿದ್ದೀರಿ. ಹಿಂದೆ ಇದ್ದ ಡಿಸಿಯಿಂದ ಆದೇಶದಲ್ಲಿ ಎಲ್ಲಿಯೂ ರಾಜಕಾಲುವೆ ಬಗ್ಗೆ ಪ್ರಸ್ತಾಪ ಇಲ್ಲವೇ ಇಲ್ಲ. ನೀವು ಅದನ್ನು ಬಿಟ್ಟು ಬರೀ ರಾಜಕಾಲುವೆ ಬಗ್ಗೆ ಮಾತನಾಡುತ್ತಿದ್ದೀರಿ. ರಾಜಕಾರಣಿಗಳೇ ಭೂ ಮಾಫಿಯಾ. ಇನ್ಯಾರು ಕಳ್ಳರು ಬರುತ್ತಾರೆಯೇ ಇಲ್ಲಿಗೆ ಪ್ರಕರಣವನ್ನು ಮುಚ್ಚಿಹಾಕಿ, ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸಾರ್ವಜನಿಕರು ಮಾತನಾಡುವಂತೆ ಮಾಡುತ್ತಾರೆ. ನಂತರ ನೆಲಗಳ್ಳರು, ಭೂಗಳ್ಳರ ಬಗ್ಗೆ ಯಾರೂ ಮಾತನಾಡದಂತ ವಾತಾವರಣ ಸೃಷ್ಟಿಸುತ್ತಾರೆ ಎಂದರು.
ಉಳಿದ ಪ್ರಕರಣಗಳು ತನಿಖೆಯಾಗಬೇಕು :
ಸದ್ಯ, ಸಾ.ರಾ.ಚೌಲ್ಟಿç ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣವಾಗಿರುವ ವಿಚಾರದ ಬಗ್ಗೆ ಮಾತ್ರ ಮಾತನಾಡಲಾಗುತ್ತಿದೆ. ಆದರೆ, ಇನ್ನುಳಿದ ನಾಲ್ಕು ಪ್ರಕರಣಗಳ ಕಥೆ ಏನು ಎಂದು ಇದೇ ವೇಳೆ ಎಚ್. ವಿಶ್ವನಾಥ್ ಪ್ರಶ್ನಿಸಿದರು.
ಪ್ರಾದೇಶಿಕ ಆಯುಕ್ತರು ಶಾಸಕ ಸಾ.ರಾ.ಮಹೇಶ್ ಒಡೆತನದ ದಟ್ಟಗಳ್ಳಿಯಲ್ಲಿರುವ ಸಾ.ರಾ.ಚೌಲ್ಟಿçಯಲ್ಲಿ ರಾಜಕಾಲುವೆ ಒತ್ತುವರಿ ಆಗಿಲ್ಲ ಅಂತ ವರದಿ ಕೊಡ್ತಾರೆ. ಚೌಲ್ಟಿç ಎಷ್ಟು ಎಕರೆಯಲ್ಲಿ ನಿರ್ಮಾಣ ಆಗಿದೆ. ನಿಮಗೆ ಎಷ್ಟು ಎಕರೆ ಜಾಗ ಮಂಜೂರಾಗಿದೆ. ಸರ್ವೆ ನಂ98 ರಲ್ಲಿ ಮೂಡಾ ಜಾಗ ಒತ್ತುವರಿ ಆಗಿದೆಯಾ. ರಾಜಾ ಕಾಲುವೆ ಒತ್ತುವರಿ ಆಗಿದೆಯಾ. ಇದೆಲ್ಲದರ ಬಗ್ಗೆ ತನಿಖೆ ಆಗಬೇಕು ಎಂದು ಒತ್ತಾಯಿಸಿದರು.
ಇನ್ನುಳಿದ ನಾಲ್ಕು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹಿಂದಿನ ಜಿಲ್ಲಾಧಿಕಾರಿ ಆಗಿದ್ದ ರೋಹಿಣಿ ಸಿಂಧೂರಿ ನೀಡಿದ್ದ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು. ಆರ್.ಟಿ.ನಗರ, ಲಿಂಗಾAಬುದಿ ಕೆರೆ ಜಾಗಗಳ ಬಗ್ಗೆಯೂ ತನಿಖೆ ಆಗಬೇಕು. ಎಲ್ಲ ನಾಲ್ಕು ಪ್ರಕರಣಗಳ ಬಗ್ಗೆಯೂ ತನಿಖೆ ಆಗಬೇಕು ಆಗ್ರಹಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss