ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೌಲರ್ಗಳ ಬಿಗು ದಾಳಿಯಿಂದ ಟೀಂ ಇಂಡಿಯಾ ಲಂಕಾ ತಂಡವನ್ನು ಮೊದಲ ಟಿ20 ಪಂದ್ಯದಲ್ಲಿ 2 ರನ್ ರೋಚಕ ಗೆಲುವು ದಾಖಲಿಸಿದೆ.
163 ರನ್ ಟಾರ್ಗೆಟ್ ಚೇಸ್ ಮಾಡಿದ ಶ್ರೀಲಂಕಾ ಶಿವಂ ಮಾವಿ ದಾಳಿಗೆ ಆರಂಭದಿಂದಲೇ ವಿಕೆಟ್ ಕಳೆದುಕೊಂಡಿತು. ಅಂತಿಮ ಹಂತದಲ್ಲಿ ಲಂಕಾದ ಕರುಣಾರತ್ನೆ ಸಿಡಿಸಿ ಎರಡು ಸಿಕ್ಸರ್ ಪಂದ್ಯದ ಗತಿ ಬದಲಿಸುವ ಸೂಚನೆ ನೀಡಿತ್ತು. ಆದರೆ ಕೊನೆಯ ಎಸೆತದಲ್ಲಿ ಭಾರತ 2 ರನ್ ಗೆಲುವು ದಾಖಲಿಸಿತು. ಭಾರತದ ಬೌಲರ್ಸ್ ಪರಾಕ್ರಮದಿಂದ ಲಂಕಾ ತಂಡವನ್ನು160 ರನ್ಗೆ ಕಟ್ಟಿ ಹಾಕಲಾಯಿತು.
ಅಂತಿಮ 1 ಎಸೆತದಲ್ಲಿ ಲಂಕಾಗೆ 4 ರನ್ ಬೇಕಿತ್ತು. ಕ್ರೀಸ್ನಲ್ಲಿ ಅಗಲೇ ಸಿಕ್ಸರ್ ಸಿಡಿಸಿದ್ದ ಚಮಿಕಾ ಕರುಣರತ್ನೆ ಮತ್ತೊಂದು ಸ್ಫೋಟಕ ಹೊಡೆತಕ್ಕೆ ಸಜ್ಜಾಗಿದ್ದರು. ಆದರೆ ಅಕ್ಸರ್ ಪಟೇಲ್ ಚಾಣಾಕ್ಷ ಬೌಲಿಂಗ್ನಿಂದ ಸಿಕ್ಸರ್ ಬೌಂಡರಿ ಬರಲಿಲ್ಲ. 2ನೇ ರನ್ ಕದಿಯಲು ಹೋದ ಮಧುಶಂಕ ರನೌಟ್ ಆದರು. ಈ ಮೂಲಕ ಟೀಂ ಇಂಡಿಯಾ 2 ರನ್ ಗೆಲುವು ದಾಖಲಿಸಿತು.