ಕಾಶ್ಮೀರಿ ಫೈಲ್ಸ್​​ ಕುರಿತು ಲಪಿಡ್ ಹೇಳಿಕೆ: ಯಹೂದಿ ವಿರೋಧಿ ಸಂದೇಶ ಶೇರ್​ ಮಾಡಿದ ಇಸ್ರೇಲ್​ ರಾಯಭಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಕಾಶ್ಮೀರಿ ಫೈಲ್ಸ್​​ ಸಿನಿಮಾ ಕುರಿತು ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲಪಿಡ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಬೆನ್ನೆಲ್ಲೇ ಭಾರತದಲ್ಲಿರುವ ಇಸ್ರೇಲ್​ ರಾಯಭಾರಿ ನೌರ್ ಗಿಲೋನ್, ತಾವು ಸ್ವೀಕರಿಸಿದ ಹತ್ಯಾಕಾಂಡ ಸಮರ್ಥಿಸುವ ಮತ್ತು ಹಿಟ್ಲರ್‌ನನ್ನು ಹೊಗಳಿದ ಸಂದೇಶದ ಸ್ಕ್ರೀನ್‌ಶಾಟ್​ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವಾರ ಐಎಫ್‌ಎಫ್‌ಐ ಚಲನಚಿತ್ರೋತ್ಸವದಲ್ಲಿ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಡಾವ್ ಲಪಿಡ್, ಕಾಶ್ಮೀರ ಫೈಲ್ಸ್​​ ಚಿತ್ರವನ್ನು ಪ್ರಚಾರ ಕ್ರಮ ಮತ್ತು ಅಶ್ಲೀಲ ಎಂದು ಹೇಳುವ ಮೂಲಕ ವಿವಾದ ಹುಟ್ಟು ಹಾಕಿದ್ದರು. ಇದನ್ನು ಇಸ್ರೇಲ್​ನ ರಾಯಭಾರಿಯಾದ ನೌರ್ ಗಿಲೋನ್ ಸ್ವತಃ ಟೀಕಿಸಿದ್ದರು. ಇದೀಗ ತಾವು ಸ್ವೀಕರಿಸಿದ ಯಹೂದಿ ವಿರೋಧಿ ಸಂದೇಶವೊಂದನ್ನು ಟ್ವಿಟರ್​ನಲ್ಲಿ ನೌರ್ ಗಿಲೋನ್ ಹಂಚಿಕೊಂಡಿದ್ದಾರೆ.

ಈ ದಿಕ್ಕಿನಲ್ಲಿ ನಾನು ಪಡೆದ ಕೆಲವು ಡಿಎಂ (DM)ಗಳಲ್ಲಿ ಒಂದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಪಿಎಚ್‌ಡಿ ಹೊಂದಿರುವ ವ್ಯಕ್ತಿಯೊಬ್ಬರ ಪ್ರೊಫೈಲ್ ಪ್ರಕಾರ ಎಂದು ಬರೆದು, ಆತ ನನ್ನ ರಕ್ಷಣೆಗೆ ಅರ್ಹನಲ್ಲದಿದ್ದರೂ, ಆತನ ಗುರುತಿನ ಮಾಹಿತಿಯನ್ನು ಅಳಿಸಲು ನಾನು ನಿರ್ಧರಿಸಿದೆ ಎಂದು ಟ್ವೀಟ್​ ಮಾಡಿ, ಇದಕ್ಕೆ ಹಿಟ್ಲರ್​​ ಮಹಾನ್ ವ್ಯಕ್ತಿ ಎಂಬ ಹೊಗಳಿದ ಸಂದೇಶದ ಸ್ಕ್ರೀನ್‌ಶಾಟ್​ ಟ್ವೀಟ್​ ಮಾಡಿದ್ದಾರೆ.

 

ಮತ್ತೊಂದು ಟ್ವೀಟ್​ ಮಾಡಿ, ನಿಮ್ಮ ಬೆಂಬಲವು ನನಗೆ ತಲುಪಿದೆ. ಉಲ್ಲೇಖಿಸಲಾದ ಡಿಎಂ ಭಾರತದಲ್ಲಿ ನಾವು ಆನಂದಿಸುವ ಸ್ನೇಹವನ್ನು ಯಾವುದೇ ರೀತಿಯಲ್ಲಿ ಪ್ರತಿಬಿಂಬಿಸುವುದಿಲ್ಲ. ಯಹೂದಿ ವಿರೋಧಿ ಭಾವನೆಗಳು ಅಸ್ತಿತ್ವದಲ್ಲಿವೆ ಎಂಬುದನ್ನು ಇದು ನೆನಪಿಸಬೇಕೆಂದು ಬಯಸಿದೆ. ನಾವು ಇದನ್ನು ಜಂಟಿಯಾಗಿ ವಿರೋಧಿಸಬೇಕು ಮತ್ತು ನಾಗರಿಕ ಮಟ್ಟದ ಚರ್ಚೆಯನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!