Tuesday, August 16, 2022

Latest Posts

ಕೊನೆಯ ಏಕದಿನ ಪಂದ್ಯವನ್ನೂ ಸೋತ ಭಾರತೀಯ ವನಿತೆಯರು

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಭಾರತೀಯ ವನಿತೆಯರು ದ.ಆಫ್ರಿಕಾದೆದುರಿನ ಕೊನೆಯ ಏಕದಿನ ಪಂದ್ಯವನ್ನೂ ಸೋತಿದ್ದಾರೆ. ಇದರೊಂದಿಗೆ ದ.ಆಫ್ರಿಕಾವು ಸರಣಿಯನ್ನು 4-1ರಿಂದ ಗೆದ್ದುಕೊಂಡಿದೆ.
ಭಾರತೀಯ ವನಿತೆಯರ ಬ್ಯಾಟಿಂಗ್ ವೈಫಲ್ಯವು ಮತ್ತೊಮ್ಮೆ ತಂಡದ ಸೋಲಿಗೆ ಕಾರಣವಾಯಿತು. ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಭಾರತವು  49.3 ಓವರುಗಳಲ್ಲೆ ಕೇವಲ 188 ರನ್‌ಗಳಿಗೆ ಆಲೌಟಾಯಿತು.
ನಾಯಕಿ ಮಿಥಾಲಿ ರಾಜ್ ಅಜೇಯ 79 ರನ್ ಹಾಗೂ ಹರ್ಮನ್‌ಪ್ರೀತ್ ಕೌರ್ 30 ರನ್ ಗಳಿಸಿದ್ದು ಬಿಟ್ಟರೆ ಉಳಿದಂತೆ ಯಾರಿಂದಲೂ ಗಮನಾರ್ಹ ಕೊಡುಗೆ ಬರಲಿಲ್ಲ. ಹರ್ಮನ್‌ಪ್ರೀತ್ ರಿಟೈರ್ಡ್ ಹರ್ಟ್ ಆದುದು ಭಾರತಕ್ಕೆ ಹಿನ್ನಡೆಯಾಯಿತು.
ದ.ಆಫ್ರಿಕಾವು 189 ರನ್‌ಗಳ ಗುರಿಯನ್ನು 48.2 ಓವರುಗಳಲ್ಲಿ 5 ವಿಕೆಟ್ ಕಳಕೊಂಡು ಸಾಧಿಸಿತು. ಮಿಗ್ನೋನ್ ಡು ಪ್ರೀಜ್ 57 ರನ್ ಗಳಿಸಿದರು. ಅನ್ನೆಕೆ ಬೋಶ್ 58 ರನ್ ಮಾಡಿದರು.
ರಾಜೇಶ್ವರಿ ಗಾಯಕವಾಡ್ 3 ವಿಕೆಟ್ ಗಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss