ಉಜ್ಬೇಕಿಸ್ತಾನದಲ್ಲಿ ಭುಗಿಲೆದ್ದ ಹಿಂಸಾಚಾರ; 18 ಮಂದಿ ಸಾವು, 243 ಜನರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉಜ್ಬೇಕಿಸ್ತಾನದ ಕರಕಲ್ಪಕಸ್ತಾನ್ ಪ್ರದೇಶದ ಸ್ವಾಯುತ್ತತೆಗೆ ಆಗ್ರಹಿಸಿ ಪ್ರತ್ಯೇಕತಾವಾದಿಗಳು ನಡೆಸುತ್ತಿರುವ ಉಗ್ರ ಪ್ರತಿಭಟನೆಯಲ್ಲಿ 18 ಮಂದಿ ಮೃತಪಟ್ಟಿದ್ದಾರೆ. ಪ್ರತಿಭಟನಾಕಾರರು ಹಾಗೂ ಭದ್ರತಾ ಪಡೆಗಳ ನಡುವೆ ಘರ್ಷಣೆಯಲ್ಲಿ 243 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ರಷ್ಯಾದ ನೆರೆ ರಾಷ್ಟ್ರವಾದ ಉಜ್ಬೇಕಿಸ್ತಾನದ ವಾಯುವ್ಯ ಭಾಗಕ್ಕಿರುವ ಕಾರಕಲ್ಪಸ್ತಾನ್‌ ಜನಾಂಗಿಯ ಅಲ್ಪಸಂಖ್ಯಾತಾಗಿರುವ ಕಾರಕಲ್ಪಾಕ್‌ ಗಳು ಪ್ರತ್ಯೇಕ ರಾಷ್ಟ್ರಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜುಲೈ 3 ರಂದು ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೊಯೆವ್ ಕಾರಕಲ್ಪಸ್ತಾನ್‌ ಪ್ರಾಂತ್ಯದ ಸಾರ್ವಭೌಮ ಸ್ಥಾನಮಾನವನ್ನು ಕಸಿದುಕೊಳ್ಳುವ ಸಂವಿಧಾನ ತಿದ್ದುಪಡಿ ತಂದಿದ್ದನ್ನು ವಿರೋಧಿಸಿ ಅಶಾಂತಿ, ದೊಂಬಿ, ಗಲಭೆಗಳು ಭುಗಿಲೆದ್ದಿವೆ.
ಈ ಪ್ರಾಂತ್ಯದಲ್ಲಿ ತಿಂಗಳ ಅವಧಿಗೆ ಕರ್ಫ್ಯೂ ಘೋಷಿಸಲಾಗಿದೆ. ಕಳೆದ ಶುಕ್ರವಾರ ನಡೆಸಲಾದ ಬೃಹತ್ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಕರಕಲ್ಪಾಕ್‌ಸ್ತಾನ್‌ನ ರಾಜಧಾನಿ ನುಕುಸ್‌ನಲ್ಲಿ ಕನಿಷ್ಠ 516 ಜನರನ್ನು ಬಂಧಿಸಲಾಗಿತ್ತು.
ಪ್ರತಿಭಟನಾಕಾರರು ಕಲ್ಲುತೂರಾಟ ನಡೆಸಿ, ಸರ್ಕಾರಿ ಆಸ್ತಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ದಾಳಿ ಮಾಡುವ ಮೂಲಕ ವಿನಾಶಕಾರಿ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಅಧ್ಯಕ್ಷ ಮಿರ್ಜಿಯೊಯೆವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!