LATEST UPDATE | ಪಾಕ್‌ನಿಂದ ಮತ್ತೆ ಪೂಂಚ್, ಉರಿ ಸೆಕ್ಟರ್ ಗಳಲ್ಲಿ ಶೆಲ್ ದಾಳಿ: ಭಾರತದಿಂದ ತಿರುಗೇಟು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನ ಮತ್ತೆ ಭಾರತದ ಮೇಲೆ ಕಾಲು ಕೆರೆದು ದಾಳಿ ನಡೆಸುತ್ತಲೇ ಇದೆ. ನಿನ್ನೆ ಪಾಕಿಸ್ತಾನ ಭಾರತದ 36 ಕಡೆಗಳಲ್ಲಿ 300ರಿಂದ 400 ಡ್ರೋನ್​ಗಳ ಮೂಲಕ ದಾಳಿ ನಡೆಸಲು ಯತ್ನಿಸಿತ್ತು. ಭಾರತ ಕೂಡ ಪಾಕಿಸ್ತಾನದೊಳಗೆ ಅನೇಕ ಪ್ರದೇಶಗಳ ಮೇಲೆ ದಾಳಿ ನಡೆಸಿತ್ತು. ಇದೀಗ ಇಂದು ಮತ್ತೆ ಉರಿ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಪಾಕಿಸ್ತಾನ ಮತ್ತೆ ಶಸ್ತ್ರಾಸ್ತ್ರ ಮತ್ತು ಫಿರಂಗಿ ಗುಂಡಿನ ದಾಳಿ ನಡೆಸಿದೆ. ಭಾರತವೂ ತಿರುಗೇಟು ನೀಡುತ್ತಿದೆ.

ಉರಿಯಲ್ಲಿ ಗುಂಡಿನ ದಾಳಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿದೆ. ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘಿಸಿ, ಉರಿ ಸೆಕ್ಟರ್‌ನಲ್ಲಿ ಶೆಲ್ ದಾಳಿ ಆರಂಭಿಸಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!