spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಹಿಳೆಯರ ಆತ್ಮರಕ್ಷಣೆಗೆ ‘ಆಟೋ ರಕ್ಷಾ ಫೌಂಡೇಶನ್’ ಆರಂಭ

- Advertisement -Nitte

ದಿಗಂತ ವರದಿ ಧಾರವಾಡ:

ಮಹಿಳೆಯ ಆತ್ಮ ರಕ್ಣಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಆಟೋ ರಕ್ಷಾ ಫೌಂಡೇಶನ್ ಆರಂಭವಾಗಿದ್ದು ಸಮಾಜಕ್ಕೆ ಶಿಕ್ಷಣದ ಜೊತೆ ರಕ್ಷಣೆ ಒದಗಿಸುವಂತಾಗಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ ಗುಡಸಿ ಹೇಳಿದರು.
ಇಲ್ಲಿಯ ಕವಿವಿಯಲ್ಲಿ ನೂತವಾಗಿ ಪ್ರಾರಂಭವಾದ ಆಟೋ ರಕ್ಷಾ ಫೌಂಡೇಶನ್ ಚಾಲನೆ ನೀಡಿ ಮಾತನಾಡಿದರು. ಇತ್ತೀಚಿಗೆ ಮಹಿಳೆಯರ ಮೇಲೆ ನಡೆಯುತ್ತಿರು ದೌರ್ಜನ್ಯ ಹೆಚ್ಚಾಗುತ್ತಿದ್ದು, ಆದರಿಂದ ಮಹಿಳೆಯರೆ ಸಯಂ ಆತ್ಮ ರಕ್ಷಣೆ ಮಾಡಿಕೊಳ್ಳುವಂತ ಹಲವಾರು ಕೌಶಲ್ಯ ಕಲಿಯಬೇಕಾಗಿದೆ. ಅದಕ್ಕಾಗಿ ಈ ಫೌಂಡೇಶನ್ ಗ್ರಾಮಗಳಿಗೆ ಹೋಗಿ ಯುವತಿಯರಿಗೆ ಮತ್ತು ಮಹಿಳೆಯರಿಗೆ ಆತ್ಮ ರಕ್ಷಣೆ ಕೌಶಲ್ಯ ಕಲಿಸುವ ಕೆಲಸ ಮಾಡಿತ್ತಿದೆ ಎಂದರು.
ಸಮಾಜವಕಾರ್ಯ ವಿಭಾಗದ ಮುಖ್ಯಸ್ಥೆ ಸಂಗೀತ ಮಾನೆ ಮಾತನಾಡಿ, ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಈಗಾಗಲೇ ಸಮಾಜ ಸೇವೆಯಲ್ಲಿ ಪ್ರೌವೃತವಾಗಿದ್ದು, ಈ ಫೌಂಡೇಶನ್ ಮೂಲಕ ಮಹಿಳೆಯರ ರಕ್ಷಣೆ ಮಾಡುವು ಕಾರ್ಯ ಮಾಡುತ್ತಿದೆ. ಇದಕ್ಕೆ ವಿಶ್ವವಿದ್ಯಾಲಯದ ಸಂಪೂರ್ಣ ಸಹಕಾರವಿರುತ್ತೆ ಎಂದು ಹೇಳಿದರು.
ಕೇಂದ್ರ ಕಾರಾಗೃಗ ಅಧಿಕ್ಷಕರಾದ ಎಂ. ಎ ಮರಿಗೌಡ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಆತ್ಮ ರಕ್ಷಣೆಯ ವಿವಿಧ ಕೌಶಲ್ಯಗಳನ್ನು ತಿಳಿಸಿಕೊಟ್ಟರು.
ಕುಲಸಚಿವ ಕೆ.ಟಿ. ಹನುಮಂತಪ್ಪ, ಮೌಲ್ಯಮಾಪನ ಎಚ್. ನಾಗರಾಜ, ಪತ್ರಿಕೋದ್ಯಮ ಮುಖ್ಯಸ್ಥ ಜೆ.ಎಂ ಚಂದುನವರ, ಜಯಶ್ರೀ ಶೆಟ್ಟರ, ಫೌಂಡೇಶನ್ ಅಧ್ಯಕ್ಷ ಸುನಿಲ ಜಂಗಾನಿ‌ ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss