ಭಾರತದ ಮೊದಲ ಹೈ ಥ್ರೂಪುಟ್ ಉಪಗ್ರಹ ಬ್ರಾಡ್ಬ್ಯಾಂಡ್ ಸೇವೆ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತದ ತನ್ನ ಮೊದಲ ಹೈ-ಥ್ರೋಪುಟ್ ಉಪಗ್ರಹ (HTS) ಬ್ರಾಡ್ಬ್ಯಾಂಡ್ ಸೇವೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬೆಂಬಲದೊಂದಿಗೆ ಸೋಮವಾರ ಉಡಾವಣೆ ಮಾಡಿದೆ.

ದೆಹಲಿಯ ಲೆ ಮೆರಿಡಿಯನ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಾಡ್ಬ್ಯಾಂಡ್ ಉಪಗ್ರಹ ಮತ್ತು ನೆಟ್ವರ್ಕ್ ಸೇವೆಗಳ ಪ್ರಮುಖ ಪೂರೈಕೆದಾರ ಹ್ಯೂಸ್ ಕಮ್ಯೂನಿಕೇಶನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (HCI) ಎಚ್ಟಿಎಸ್ ಸೇವೆಯ ವಾಣಿಜ್ಯ ಉಡಾವಣೆಯನ್ನ ಘೋಷಿಸಿತು.

ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, HCI ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪಾರ್ಥೋ ಬ್ಯಾನರ್ಜಿ ಮತ್ತು ಎಚ್ಸಿಐನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಶಿವಾಜಿ ಚಟರ್ಜಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಎಚ್ ಸಿಐನ ಎಚ್ ಟಿಎಸ್ ಬ್ರಾಡ್ ಬ್ಯಾಂಡ್ ಸೇವೆಯು ಇಸ್ರೋದ ಜಿಸ್ಯಾಟ್ -11 ಮತ್ತು ಎಲ್ ಸ್ಯಾಟ್ -29 ಉಪಗ್ರಹಗಳಿಂದ ಕೆಯು-ಬ್ಯಾಂಡ್ ಸಾಮರ್ಥ್ಯವನ್ನ ಹ್ಯೂಸ್ ಜುಪಿಟರ್ ಪ್ಲಾಟ್ ಫಾರ್ಮ್ ಗ್ರೌಂಡ್ ತಂತ್ರಜ್ಞಾನದೊಂದಿಗೆ ಸಂಯೋಜಿಸುತ್ತದೆ.

ಕು-ಬ್ಯಾಂಡ್ ಉಪಗ್ರಹ ಸಂವಹನ ಮತ್ತು ಪ್ರಸಾರಕ್ಕಾಗಿ ಬಳಸಲಾಗುವ ಒಂದು ಮೈಕ್ರೋವೇವ್ ಆವರ್ತನ ಬ್ಯಾಂಡ್ ಆಗಿದೆ. ಇನ್ನು ಭೂಪ್ರದೇಶದ ಸ್ವಾಗತಕ್ಕಾಗಿ ಸುಮಾರು 12 ಗಿಗಾಹರ್ಟ್ಜ್ ಆವರ್ತನಗಳನ್ನ ಮತ್ತು ಪ್ರಸರಣಕ್ಕಾಗಿ 14 ಗಿಗಾಹರ್ಟ್ಜ್ ಆವರ್ತನಗಳನ್ನ ಬಳಸುತ್ತದೆ. ಇಸ್ರೋದ ಉಪಗ್ರಹದಿಂದ ಕು-ಬ್ಯಾಂಡ್ ಸಾಮರ್ಥ್ಯವನ್ನ ಹ್ಯೂಸ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ, ಹೈ-ಸ್ಪೀಡ್ ಬ್ರಾಡ್ ಬ್ಯಾಂಡ್ʼನ್ನ ಭಾರತದಾದ್ಯಂತ ತಲುಪಿಸಬಹುದು. ಈ ಪ್ರದೇಶಗಳು ಭೌಗೋಳಿಕ ಜಾಲಗಳ ವ್ಯಾಪ್ತಿಯನ್ನು ಮೀರಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!