Wednesday, August 10, 2022

Latest Posts

ಮಂಗಳೂರು-ಕಲಬುರಗಿ ನಡುವೆ ನಾನ್ ಎಸಿ ಸ್ಲೀಪರ್ ಬಸ್ಸು ಸೇವೆ ಆರಂಭ

ಹೊಸದಿಗಂತ ವರದಿ, ಮಂಗಳೂರು:

ಪ್ರಯಾಣಿಕರ ಅನುಕೂಲಕ್ಕಾಗಿ ಮಂಗಳೂರು-ಕಲಬುರಗಿ ಮಧ್ಯೆ ಹವಾನಿಯಂತ್ರಣ ಸೌಲಭ್ಯ ಹೊರತಾದ ಸ್ಲೀಪರ್ ಬಸ್ಸು ಸೇವೆ ಮಾ.೮ರಿಂದ ಆರಂಭಗೊಂಡಿದೆ.
ನೂತನ ಬಸ್ಸು ಸೇವೆಗೆ ಮಂಗಳೂರು ಮಹಾ ನಗರಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ ಸೋಮವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ನಿಯಂತ್ರಣಾಧಿಕಾರಿ ಎಸ್.ಎನ್.ಅರುಣ್; ಪ್ರಯಾಣಿಕರ ಬೇಡಿಕೆಯ ಮೇರೆಗೆ ನೂತನ ಬಸ್ಸು ಸೇವೆಯನ್ನು ಒದಗಿಸಲಾಗುತ್ತಿದೆ. ಈ ಬಸ್ಸು ಸೇವೆಗೆ ಆನ್‌ಲೈನ್ ಬುಕ್ಕಿಂಗ್ ಸೌಲಭ್ಯ ಇದೆ. ೩೦ ಬರ್ತ್‌ಗಳಿರುವ ಬಸ್ಸಿನಲ್ಲಿ ಪ್ರಯಾಣಿಕರಿಗೆ ಅಗತ್ಯವಿರುವ ಮೊಬೈಲ್ ಚಾರ್ಜರ್‌ನಂತಹ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದರು.
ಲಿಂಗಪ್ಪಯ್ಯ ಕಾಡು, ಉಡುಪಿ, ಕುಂದಾಪುರ, ಭಟ್ಕಳ, ಅಂಕೋಲಾ, ಹುಬ್ಬಳ್ಳಿ-ಕೆರೂರು-ಗದ್ದನಕೇರಿ ಕ್ರಾಸ್-ಬೀಳಗಿ ಕ್ರಾಸ್-ವಿಜಯಪುರ-ಸಿಂಧಗಿ-ಜೇವರ್ಗಿ ಮಾರ್ಗದಲ್ಲಿ ನೂತನ ಬಸ್ಸು ಸಂಚರಿಸಲಿದೆ. ಮಂಗಳೂರಿ-ಕಲಬುರುಗಿ ಪ್ರಯಾಣಕ್ಕೆ ರೂ.೧,೧೫೦ ದರ ನಿಗದಿ ಪಡಿಸಲಾಗಿದೆ. ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ ೪.೩೦ಕ್ಕೆ ಹೊರಡಲಿದೆ. ಕಲಬುರಗಿಯಿಂದ ಅಪರಾಹ್ನ ೨.೪೫ಕ್ಕೆ ನೂತನ ಬಸ್ಸು ಹೊರಡಲಿದೆ ಎಂದು ವಿಭಾಗ ನಿಯಂತ್ರಣಾಧಿಕಾರಿ ನುಡಿದರು.
ಡಿಟಿಒ ಕಮಲ್‌ಕುಮಾರ್, ಸಹಾಯಕ ಕಾರ್ಯಕಾರಿ ಅಭಿಯಂತರ ದೇವೇಂದ್ರ ಗುಡಿಗಾರ್, ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಿಯಾ ಸುವರ್ಣ, ಕಾನೂನು ಅಧಿಕಾರಿ ಸಹನಾ ಭಟ್ ಮತ್ತು ಲೆಕ್ಕಾಧಿಕಾರಿ ಪ್ರೇಮಾ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss