ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………….
ಹೊಸ ದಿಗಂತ ವರದಿ, ಜಮಖಂಡಿ :
ತಾಲೂಕಿನ ಶ್ರಮಬಿಂದು ಸಾಗರಕ್ಕೆ ಮತ್ತೇ ಅಪಾಯ ಬಂದಿದೆ ಅಲ್ಲಿದ್ದ ವಿದ್ಯುತ ಪರಿವರ್ತಕ ಮತ್ತು ಪೆನಲ್ ಬೋರ್ಡಗಳಿಗೆ ನೀರು ಬರುತ್ತಿದ್ದು ಅದರ ಜೊತೆಗೆ ಸುತ್ತಲಿನ ತಡೆಗೋಡೆಗೆ ನೀರು ಅಪ್ಪಳಿಸಿ ಬಿರುಕು ಬಿದ್ದು ನೀರಿನ ಹೊಡೆತದಿಂದ ಅಲ್ಲಿದ್ದ ಮಣ್ಣು ಕೊಚ್ಚಿಹೋಗಿದ್ದು ಶಾಸಕರ ಸಮಯ ಪ್ರಜ್ಷೆಯಿಂದ ಮುಂದಾಗುವ ಅನಾಹುತವನ್ನು ತಪ್ಪಿಸಿದ್ದಾರೆ.
ಶ್ರಮಬಿಂದು ಸಾಗರಕ್ಕೆ ಭೇಟಿ ನೀಡಿದ ಶಾಸಕ ಆನಂದ ನ್ಯಾಮಗೌಡ ಕಳೆದ ಐದಾರು ದಿನಗಳಿಂದ ಮಹಾರಾಷ್ಟದ ಕೊಲ್ಹಾಪುರ ಮತ್ತು ಸಾಂಗ್ಲಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿ ಮಹಾರಾಷ್ರದ ಎಲ್ಲ ಡ್ಯಾಂಗಳು ತುಂಬಿ ಹರಿಯುತ್ತಿರುವದರಿಂದ ಕರ್ನಾಟಕಕ್ಕೆ ನೀರು ಬೀಡುತ್ತಿದ್ದಾರೆ. ಕಳೆದ ಎರಡು ದಿನ ೩ ರಿಂದ ೩.೯ ಲಕ್ಷ ಕ್ಯೂಸೆಕ್ಸ ನೀರು ಬಿಡುತ್ತಿದ್ದಾರೆ. ಇಲ್ಲಿಯವರೆಗೆ ನಮ್ಮ ತಾಲೂಕಿಗೆ ಯಾವುದೇ ಅನಾಹುತ ಸಂಭವಿಸಿಲ್ಲ, ಆದರೆ ಇಂದು ಬಂದ ಮಾಹಿತಿ ಪ್ರಕಾರ ರಾಜಾಪೂರ ಹಾಗೂ ಕಲ್ಲೋಳ್ಳಿ ಡ್ಯಾಂಗಳಿಂದ ೪ ಲಕ್ಷ ಕ್ಯೂಸೆಕ್ಸ ನೀರು ಬಿಡುವ ಸಾದ್ಯತೆ ಎಂದು ನೀರಾವರಿ ಇಲಾಖೆಯಿಂದ ಮಾಹಿತಿ ಬಂದಿದೆ ಶ್ರಮಬಿಂದು ಸಾರಗರಕ್ಕೆ ನೀರಿನ ಹೊಡೆತ ಹೆಚ್ಚಾಗಿದ್ದು ಯಾವುದೆ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಜರುಗಿಸಿದೆ ಅಲ್ಲಿದ್ದ ಮೋಟರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲಾಗಿದೆ ಎಂದರು.
ನಾವೂ ಕೂಡ ನದೀ ತೀರದ ಬಾಧಿತ ಮತ್ತು ಅಲ್ಪ ಬಾಧಿತ ಗ್ರಾಮಗಳಿಗೆ ತೆರಳಿ ಜನರಿಗೆ ಸುರಕ್ಷಿತ ಜಾಗಕ್ಕೆ ತೆರಳಲು ಸೂಚಿಸಿದ್ದೇವೆ. ಇದೇ ರೀತಿಯಾಗಿ ಪ್ರವಾಹ ಮುಂದುವರೆದರೆ ಅಪಾಯ ಮಾತ್ರ ಕಟ್ಟಿಟ್ಟ ಬುತ್ತಿಯಾಗಿದೆ. ಜನರು ಹೆಚ್ಚಿನ ನೀರು ಬರುವುದಿಲ್ಲ ಎಂದು ತಿಳಿದು ನಿರ್ಲಕ್ಷ ಮಾಡದೇ ಸುರಕ್ಷಿತ ಜಾಗಕ್ಕೆ ತೆರಳಲು ಸೂಚಿಸಿದ್ದೇವೆ ಇಂದು ಮಹಾರಾಷ್ಟçದ ಸಹ್ಯಾದ್ರಿಕೊಳ್ಳದಲ್ಲಿ ವರುಣನ ಅಬ್ಬರ ಕಡಿಮೆಯಗಿದ್ದು ಅದರಿಂದ ಮುಂದಿನ ಎರಡು ದಿನಗಳಲ್ಲಿ ನೀರು ಬರುವದು ಕಡಿಮೆಯಾಗುತ್ತದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.