ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ವರದಿ, ಮೈಸೂರು:
ಕೋವಿಡ್ ನಿಯಂತ್ರಣಕ್ಕೆoದು ಜಾರಿಗೊಳಿಸಲಾಗಿರುವ ಲಾಕ್ಡೌನ್ನಿಂದ ಸಂಕಷ್ಟಗೀಡಾಗಿರುವ ನಿರ್ಗತಿಕರನ್ನು ಶಾಸಕ ಎಸ್.ಎ.ರಾಮದಾಸ್ ಅವರು ನಿರ್ಗತಿಕರ ಕೇಂದ್ರಕ್ಕೆ ಸಾಗಿಸಿ, ಅವರಿಗೆ ಊಟ, ತಿಂಡಿ, ವಸತಿಯ ವ್ಯವಸ್ಥೆಯನ್ನು ಮಾಡಿಸಿದರು.
ಮೈಸೂರಿನ ವಿವಿಧ ರಸ್ತೆ, ಭಾಗಗಳಲ್ಲಿ ನಿರ್ಗತಿಕರು ಸರಿಯಾಗಿ ಆಹಾರ, ಮಲಗಲು ವ್ಯವಸ್ಥೆಯಿಲ್ಲದೆ ತೊಂದರೆಪಡುತ್ತಿದ್ದಾರೆ ಎಂದು ಹಲವಾರು ಮಂದಿ ಶಾಸಕ ಎಸ್.ಎ ರಾಮದಾಸ್ ಅವರಿಗೆ ದೂರವಾಣಿ ಕರೆಗಳನ್ನು ಮಾಡಿ ತಿಳಿಸಿದರು.
ಈ ಹಿನ್ನಲೆಯಲ್ಲಿ ಶಾಸಕರು ತಾವೇ ಖುದ್ದಾಗಿ ನಿರ್ಗತಿಕರಿರುವ ಸ್ಥಳಕ್ಕೆ ತೆರಳಿ ಅವರ ಪರಿಸ್ಥಿತಿಯನ್ನು ವಿಚಾರಿಸಿದರು. ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಜಿಲ್ಲಾಡಳಿತದಿಂದ ತೆರೆದಿರುವ ನಿರ್ಗತಿಕರ ಕೇಂದ್ರಕ್ಕೆ ಕರೆದೊಯ್ದು ಅವರಿಗೆಲ್ಲ ಕೋವಿಡ್ ಟೆಸ್ಟ್ ಅನ್ನೂ ಮಾಡಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ
ಅವರನ್ನು ವಾಹನದಲ್ಲಿ ಕರೆದೊಯ್ದು ಸಿಐಟಿಬಿ ಮಂದಿರಕ್ಕೆ ಬಿಡಲಾಯಿತು. ಅಲ್ಲದೇ ಈ ಮಂದಿರದಲ್ಲಿ ಈಗಾಗಲೇ ಅಲ್ಲಿ ತಂಗಿರುವವರ ಯೋಗಕ್ಷೇಮವನ್ನು ಶಾಸಕರು ವಿಚಾರಿಸಿದರು. ಸ್ಥಳದಲ್ಲಿದ್ದ ಅಧಿಕಾರಿಗಳಿಗೆ, ವೈದ್ಯರಿಗೆ ಹಾಗೂ ಪೊಲೀಸ್ ಇಲಾಖೆಯವರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಎಂದು ತಿಳಿಸಿದರು.
ಕ್ಷೇತ್ರದ ಬೇರೆ ಬೇರೆ ಸ್ಥಳದಲ್ಲಿ ಸೂರಿಲ್ಲದೆ ಊಟಕ್ಕೆ ಕಷ್ಟ ಪಡುತ್ತಿರುವವರನ್ನು ಹುಡುಕಿ ಅವರನ್ನೂ ಸಿಐಟಿಬಿ ಮಂದಿರಕ್ಕೆ ಕರೆ ತರುವ ಕೆಲಸವನ್ನು ಅಧಿಕಾರಿಗಳು ಮಾಡಿದರು.
ಸದರಿ ಕಾರ್ಯಕ್ರಮದಲ್ಲಿ ನಗರಪಾಲಿಕಾ ಸದಸ್ಯರಾದ ಬಿ.ವಿ ಮಂಜುನಾಥ್, ಸೌಮ್ಯ ಉಮೇಶ್, ಶ್ರೀಮತಿ ಛಾಯಾದೇವಿ, ರೂಪ. ಬಿಜೆಪಿ ಮುಖಂಡರಾದ ಉಮೇಶ್, ಹರೀಶ್, ನಗರಪಾಲಿಕಾ ಆರೋಗ್ಯ ಅಧಿಕಾರಿಗಳು, ವಲಯ ಆಯುಕ್ತರುಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಪೊಲೀಸ್ ಠಾಣೆಯ ನಿರೀಕ್ಷಕರು ಹಾಜರಿದ್ದರು.