ಶ್ರೀಲಂಕಾ ಪ್ರಧಾನಿ ಹುದ್ದೆಯಿಂದ ಸಹೋದರ ಮಹಿಂದಾರನ್ನು ವಜಾಗೊಳಿಸಲು ಅಧ್ಯಕ್ಷ ಗೋಟಬಯ ಒಪ್ಪಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದೇಶದ ಇತಿಹಾಸದಲ್ಲೇ ಕಂಡು ಕೇಳರಿಯದ ಅತ್ಯಂತ ಭೀಕರ ಆರ್ಥಿಕ ಬಿಕ್ಕಟ್ಟಿನಲ್ಲಿಸಿಲುಕಿರುವ ಶ್ರೀಲಂಕಾ ಆರ್ಥಿಕ ದಿವಾಳಿತನದಿಂದ ಹೊರಬರಲು ಪರಿಹಾರೋಪಾಯಗಳನ್ನು ಹುಡುಕುತ್ತಿದೆ. ಈ ನಡುವೆ, ತಮ್ಮ ಸಹೋದರ ಮಹಿಂದಾ ರಾಜಪಕ್ಸ ಅವರನ್ನು ಶ್ರೀಲಂಕಾ ಪ್ರಧಾನಿ ಹುದ್ದೆಯಿಂದ ವಜಾಗೊಳಿಸಲು ಅಧ್ಯಕ್ಷ ಗೋಟಬಯ ರಾಜಪಕ್ಸ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ದೇಶದಲ್ಲಿನ ಹದಗೆಟ್ಟ ಆರ್ಥಿಕ ಪರಿಸ್ಥಿತಿ ವಿಚಾರವಾಗಿ ಕ್ರೋಧಗೊಂಡಿರುವ ಶ್ರೀಸಾಮಾನ್ಯರು, ನೂರಾರು ವ್ಯಾಪಾರಿ ಸಂಘಟನೆಗಳು ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಶ್ರೀಲಂಕಾ ಅಧ್ಯಕ್ಷ ಗೋಟಬಯ ತಕ್ಷಣವೇ ರಾಜೀನಾಮೆ ನೀಡುವಂತೆ ಆಗ್ರಹಗಳು ಕೇಳಿಬರುತ್ತಿವೆ.
ದೇಶದಲ್ಲಿ ಅಗತ್ಯವಸ್ತುಗಳು, ಆಹಾರ ಪದಾರ್ಥಗಳು, ಔಷಧಗಳ ದೇಶದಲ್ಲಿ ಗಗನ ಮುಟ್ಟಿದೆ. ದೇಶವನ್ನು ದಿವಾಳಿಯಂಚಿಗೆ ತಳ್ಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ರಾಜಪಕ್ಸ ಕುಟುಂಬ ರಾಜಕೀಯದ ವಿರುದ್ಧ ಜನರು ಬೀದಿಗಳಿದು ಪ್ರತಿಭಟಿಸುತ್ತಿದ್ದಾರೆ.
ಈ ಮಧ್ಯೆ ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ರಾಷ್ಟ್ರೀಯ ಮಂಡಳಿಯನ್ನು ನೇಮಿಸಲಾಗುವುದು, ಎಲ್ಲಾ ಪಕ್ಷಗಳನ್ನು ಒಳಗೊಂಡಿರುವ ಕ್ಯಾಬಿನೆಟ್ ನ್ನು ಸಂಸತ್ತಿನಲ್ಲಿ ರಚಿಸಲಾಗುವುದು, ಈ ಪ್ರಕ್ರಿಯೆಗೆ ಅಧ್ಯಕ್ಷ ಗೋಟಬಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಂಸದ ಮೈತ್ರಿಪಾಲ ಸಿರಿಸೇನಾ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!