ಬಿಗ್​ಬಾಸ್​ ಮನೆಗೆ ಎಂಟ್ರಿ ಕೊಟ್ಟ ಲಾಯರ್​ ಜಗದೀಶ್

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಬಿಗ್​ಬಾಸ್​ ಮನೆಗೆ 7ನೇ ಸ್ಪರ್ಧಿಯಾಗಿ ಲಾಯರ್​ ಜಗದೀಶ್​​ ಎಂಟ್ರಿ ಕೊಟ್ಟಿದ್ದಾರೆ.

ಕಳೆದ ಐದಾರು ವರ್ಷಗಳಿಂದಲೂ ಲಾಯರ್​ ಜಗದೀಶ್​​ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್​ ವಿಚಾರವಾಗಿಯೂ ಸುದ್ದಿ ಮಾಡಿದ್ದರು. ಸ್ಯಾಂಡಲ್​ವುಡ್​ ನಟ ದರ್ಶನ್​ ಕೇಸ್​ನಲ್ಲಿಯೂ ಯಾರದ್ದೋ ಕೈವಾಡ ಇದೆ. ನಾವು ದರ್ಶನ್​​ ಕೇಸ್​ ಮರು ತನಿಖೆಗೆ ಆಗ್ರಹಿಸುತ್ತೇನೆ ಎಂದು ಫ್ರೀಡಮ್​ ಪಾರ್ಕ್​ನಲ್ಲಿ ಪ್ರೊಟೆಸ್ಟ್​ ಮಾಡಿದ್ದರು.

ಸದ್ಯ ಕಿಚ್ಚ ಸುದೀಪ್ ಮುಂದೆ ಲಾಯರ್​ ಜಗದೀಶ್ ಸಮಾಜದಲ್ಲಿ ನಡೆಯುತ್ತಿರೋ ಭ್ರಷ್ಟಾಚಾರದ ಬಗ್ಗೆ ಮಾತಾಡಿದ್ದಾರೆ. ಜನಗಳ ಮುಖದಲ್ಲಿ ನಗು ಇಲ್ಲ. ಅದಕ್ಕೆ ನಾನಾ ಕಾರಣಗಳು ಇವೆ. ಕೆಲವರು EMI ಕಟ್ಟಿಲ್ಲ ಅಂತಾ, ಮಕ್ಕಳ ಫೀಸ್​ ಕಟ್ಟಿಲ್ಲ ಅಂತಾ, ಇನ್ನೂ ಕೆಲವರಿಗೆ ಜೀವನ ಅಂದ್ರೆನೇ ದೊಡ್ಡ ಚಾಲೆಂಜ್​ ಆಗುತ್ತೆ. ನಮ್ಮ ಸಮಾಜದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಈ ಬಗ್ಗೆ ಧ್ವನಿ ಎತ್ತುವವರೆ ಇಲ್ಲ ಅಂತ ಕಿಚ್ಚ ಸುದೀಪ್​ ಮುಂದೆ ಹೇಳಿದ್ದಾರೆ.

ಲಾಯರ್​ ಜಗದೀಶ್ ಅವರು ವೀಕ್ಷಕರ ವೋಟ್​ ಮೂಲಕ ನೇರವಾಗಿ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!