Tuesday, August 16, 2022

Latest Posts

‘ಸುಪ್ರೀಂ’ ಮೆಟ್ಟಿಲೇರಿದ ರಾಷ್ಟ್ರ ಲಾಂಛನ ವಿವಾದ: ಈಗ ಕಾಯ್ದೆ ಉಲ್ಲಂಘನೆ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚರ್ಚೆಗೆ ಗ್ರಾಸವಾಗಿದ್ದ ರಾಷ್ಟ್ರ ಲಾಂಛನದ ವಿವಾದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ನೂತನ ಸಂಸತ್‌ ಭವನದ ಮೇಲೆ ನಿರ್ಮಿಸಲಾಗಿರುವ ರಾಷ್ಟ್ರ ಲಾಂಛನ (ಅಸಮರ್ಪಕ ಬಳಕೆಯ ವಿರುದ್ಧದ ನಿಷೇಧ) ಕಾಯಿದೆ, 2005ರ ಉಲ್ಲಂಘನೆಯಾಗಿದೆ ಎಂದು ವಕೀಲರಾದ ಅಲ್ದನೀಶ್‌ ರೈನ್‌ ಮತ್ತು ರಮೇಶ್‌ ಕುಮಾರ್ ಮಿಶ್ರಾ ಎಂಬವರು ನ್ಯಾಯಾಲಯದ ಕದ ತಟ್ಟಿದ್ದಾರೆ.

ಲಾಂಛನದಲ್ಲಿರುವ ಸಿಂಹಗಳು ಬಾಯ್ದೆರದು ಕೋರೆಹಲ್ಲು ಪ್ರದರ್ಶಿಸಿ ಭೀತಿ ಹುಟ್ಟಿಸುವಂತೆ, ಆಕ್ರಮಣಕಾರಿಯಂತೆ ಇದೆ. ಇದು ಸಾರನಾಥ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಿ ಇಡಲಾಗಿರುವ ಸೌಮ್ಯ, ಗಾಂಭೀರ್ಯದ ಲಾಂಛನಕ್ಕೆ ವ್ಯತಿರಿಕ್ತವಾಗಿದೆ ಎಂದು ಅವರು ಮನವಿಯಲ್ಲಿ ಆಕ್ಷೇಪ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss