ಭಾರತದ ಗೌರವ ಕಾಪಾಡೋದನ್ನು ಇಂದಿರಾ ಗಾಂಧಿಯವರಿಂದ ಕಲೀರಿ: ಸಭೆಯಲ್ಲೇ ರಾಹುಲ್ ಗೆ ಪಾಠ ಮಾಡಿದ ಪತ್ರಕರ್ತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಎಲ್ಲೇ ಹೋದ್ರೂ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ನಗೆಪಾಟಲಿಗೆ ಈಡಾಗೋದು ತಪ್ಪಿದ್ದಲ್ಲ.ಇತ್ತೀಚೆಗಷ್ಟೇ ಲಂಡನ್‌ ಗೆ ತೆರಳಿದ್ದ ಕಾಂಗ್ರೆಸ್‌ ಯುವನಾಯಕ ಅಲ್ಲಿನ ಭಾರತೀಯ ಮೂಲದ ಪತ್ರಕರ್ತರೊಬ್ಬರ ಬಳಿ ಭಾರತದ ಗೌರವಕಾಪಾಡೋದು ಹೇಗೆ ಎಂದು ಪಾಠ ಮಾಡಿಸಿಕೊಂಡಿದ್ದಾರೆ. ಕಾಂಗ್ರೆಸ್‌ ನ ಭಾರತ್‌ ಜೋಡೋ ಯಾತ್ರೆಯ ಬಳಿಕ ಲಂಡನ್ನಿಗೆ ತೆರಳಿದ ರಾಗಾ ಕೇಂಬ್ರಿಡ್ಜ್‌ ವಿಶ್ವವಿದ್ಯಾಲಯದಲ್ಲಿ ಎಂಬಿಎ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಮೋದಿಸರ್ಕಾರವನ್ನು ಹಣಿಯಲು ಹೋಗಿ ಭಾರತ ವಿರೊಧಿ ಮಾತುಗಳನ್ನಾಡಿದ್ದರು, ಭಾಷಣದ ವೇಳೆ “ಭಾರತ್‌ ಜೋಡೋ ಯಾತ್ರೆಯ ವೇಳೆ ನಾನು ಇಬ್ಬರು ಉಗ್ರವಾದಿಗಳನ್ನು ನೋಡಿದೆ, ಅವರೂ ನನ್ನನ್ನು ನೋಡಿದರು, ನಾನು ಅಂಹಿಸಾ ಸಂದೇಶವನ್ನು ಸಾರುತ್ತ ಸಾಗುತ್ತಿದ್ದೆ ಹಾಗಾಗಿ ಅವರು ನನಗೇನೂ ಮಾಡಲಿಲ್ಲ.” ಎಂದು ಹೇಳಿದ್ದ ರಾಹುಲ್‌ ಗಾಂಧಿಯವರ ಮಾತುಗಳು ಹಾಸ್ಯಕ್ಕೀಡಾಗಿತ್ತು.

ಇದೇ ಸಂದರ್ಭದಲ್ಲಿ ಇಂಡಿಯನ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ​​(ಐಜೆಎ) ಜೊತೆಗೆ ಸಂವಾದ ನಡೆಸೋಕೆ ರಾಹುಲ್‌ ಗಾಂಧಿ ತೆರಳಿದ್ದರು. ಈ ವೇಳೆ ಐಜೆಎಯ ಸದಸ್ಯರಾಗಿರುವ, ಬಹಳ ಕಾಲದಿಂದಲೂ ನೆಹರು ಕುಟುಂಬದ ಬೆಂಬಲಿಗರೇ ಆಗಿರುವ ಸುರೇಶ್ ಕುಮಾರ್ ಗುಪ್ತಾ ಎಂಬ ಪತ್ರಕರ್ತರೊಬ್ಬರು ರಾಹುಲ್‌ ಅವರ ಭಾರತ ವಿರೋಧಿ ಮಾತುಗಳ ವಿರುದ್ಧ ಕಿಡಿಕಾರಿದ್ದಾರೆ.

ರಾಹುಲ್‌ ಗಾಂಧಿಯವರ ಕೇಂಬ್ರಿಡ್ಜ್‌ ಭಾಷಣವನ್ನು ಉಲ್ಲೇಖಿಸಿ ಪಾಠ ಮಾಡಿದ ಆ ಪತ್ರಕರ್ತರು ಹೇಳಿದ್ದೇನೆಂದರೆ…”ಗಾಂಧಿಯವರೇ, ನಿಮ್ಮ ಅಜ್ಜಿ (ಶ್ರೀಮತಿ ಇಂಧಿರಾಗಾಂಧಿ)ಯವರು ನನಗೆ ಸಹೋದರಿಯಿದ್ದಂತೆ, ಅವರು ನನಗೆ ಬಹಳ ಸಹಾಯ ಮಾಡಿದ್ದಾರೆ, ಅವರೊಬ್ಬ ಅಧ್ಬುತ ಮಹಿಳೆ, ಮೋರಾರ್ಜಿ ದೇಸಾಯಿಯವರ ಕಾಲದಲ್ಲಿ ಬಂಧಿತರಾಗಿದ್ದ ಅವರು ಜೈಲಿನಿಂದ ಮರಳಿದ ನಂತರ ಲಂಡನ್ನಿಗೆ ಬಂದಿದ್ದರು. ಆಗ ಇಲ್ಲಿನ ಪತ್ರಕರ್ತರೊಬ್ಬರು ಅವರಿಗೆ ಭಾರತದ ಸೆರೆವಾಸದ ಅನುಭವ ಹೇಗಿತ್ತು ಎಂದು ಪ್ರಶ್ನಿಸಿದರು. ಅದಕ್ಕೆ ಅವರು ನೀಡಿದ ಉತ್ತರವೇನು ಗೊತ್ತೆ? ಈ ಸಮ್ಮೇಳನದಲ್ಲಿ ನಾನು ಭಾರತದ ಬಗ್ಗೆ ಕೆಟ್ಟದ್ದನ್ನು ಮಾತನಾಡಲು ಬಯಸುವುದಿಲ್ಲ ಎಂದು ಅವರು ಉತ್ತರಿಸಿದರು. ಆದರೆ ನೀವು ಮಾತ್ರ ನಿಮ್ಮ ಕೇಂಬ್ರಿಡ್ಜ್‌ ಭಾಷಣದಿಂದಾಗಿ ಮಾಧ್ಯಮಗಳಿಂದ ದೂಷಿಸಲ್ಪಡುತ್ತೀರಿ. ನೀವು ಶ್ರೀಮತಿ ಇಂದಿರಾಗಾಂಧಿಯವರ ಮಾತುಗಳಿಂದ ಸ್ವಲ್ಪ ಪಾಠ ಕಲಿತುಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಾನು ನಿಮ್ಮ ಹಿತೈಷಿ, ನಿಮ್ಮನ್ನು ಪ್ರಧಾನಿಯಾಗಿ ನೋಡಬಯಸುತ್ತೇನೆ” ಎಂದು ತೀಕ್ಷ್ಣವಾಗಿ ಮಾತಿನ ಚಾಟಿ ಬೀಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!