ಲೀಲಾವತಿ ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟಿ: ಸಿಎಂ ಬೊಮ್ಮಾಯಿ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ಲೀಲಾವತಿ ಅವರು ಕನ್ನಡ ಸಿನಿಮಾ ರಂಗದ ಎವರ್ ಗ್ರೀನ್ ನಟಿ , ಇಂದು ಆಸ್ಪತ್ರೆ ಕಟ್ಟಿಸುವ ಮೂಲಕ ಜನರ ಸೇವೆಗೆ ಮುಂದಾಗಿದ್ದಾರೆ, ಅವರ ಈ ಕಾರ್ಯವನ್ನು ನಾವು ಶ್ಲಾಘಿಸಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕನ್ನಡ ಸಿನಿಮಾ ರಂಗದ ಹಿರಿಯ ನಟಿ ಡಾ.ಲೀಲಾವತಿ ಅವರು ನೆಲಮಂಗಲ ಹತ್ತಿರದ ಸೋಲದೇವನಹಳ್ಳಿಯಲ್ಲಿ ನಿರ್ಮಿಸಿರುವ ಆಸ್ಪತ್ರೆಯನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
ನಂತರ ಲೀಲಾವತಿ ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು. ಹಿರಿಯ ನಟಿಯ ಈ ಸೇವೆಗೆ ಪ್ರಶಂಸೆ ವ್ಯಕ್ತಪಡಿಸಿದ ಸಿಎಂ ಬೊಮ್ಮಾಯಿ ಲೀಲಾವತಿ ಅವರನ್ನು ಮನಸಾರೆ ಹೊಗಳಿದರು.
ಲೀಲಾವತಿ ಅವರು ನಿರ್ಮಿಸಿರುವ ಆಸ್ಪತ್ರೆಗೆ ಬೇಕಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸುವ ಕುರಿತು ಸಿಎಂ ಭರವಸೆ ನೀಡಿದ್ದು, ಸರ್ಕಾರದಿಂದ ಡಾಕ್ಟರ್ ಮತ್ತು ನರ್ಸ್ ನೇಮಿಸುವ ಬಗ್ಗೆ ಭರವಸೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!