ಪಶ್ಚಿಮ ಬಂಗಾಳದಲ್ಲಿ ಕೆಂಪು ಉಗ್ರರ ಆತಂಕ: ನಾಲ್ವರು ಶಂಕಿತರ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದಶಕಗಳ ಹಿಂದೆ ಪಶ್ಚಿಮ ಬಂಗಾಳದ ಪ್ರದೇಶದಲ್ಲಿ ಕಡಿಮೆಯಾಗಿದ್ದ ಎಡಪಂಥೀಯ ಉಗ್ರವಾದವು ಮತ್ತೆ ತಲೆ ಎತ್ತಿದೆ. ಪಶ್ಚಿಮ ಬಂಗಾಳದ ಪಶ್ಚಿಮ ಜಿಲ್ಲೆಗಳಲ್ಲಿ ಈ ಸಂಬಂಧ ನಿಷೇಧಿತ ಗೆರಿಲ್ಲಾ ಸಂಘಟನೆಯೊಂದಿಗೆ ನಂಟು ಹೊಂದಿರುವ ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ.

ಈ ವರ್ಷ ಮೊದಲಬಾರಿಗೆ ಏಪ್ರಿಲ್ 7 ರಂದು ಜಾರ್ಗ್ರಾಮ್ ಜಿಲ್ಲೆಯ ಬೆಲ್ಪಹಾರಿ ಕಾಡಿನಲ್ಲಿ ಸ್ಥಿರ ದೂರವಾಣಿ ಕಂಡುಬಂದಿತ್ತು. ಇದರ ಬೆನ್ನಲ್ಲೇ ಸರ್ಕಾರವು ಐದು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಿತ್ತು. ರಾಜ್ಯ ಪೋಲೀಸ್‌ ಮಹಾನಿರ್ದೇಶಕ ಮನೋಜ್‌ ಮಾಳವೀಯ ಈ ಪ್ರದೇಶಗಳಲ್ಲಿ ಪ್ರವಾಸ ಮಾಡಿ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದರು. ಇದಾದ ಕೆಲವೇ ದಿನಗಳಲ್ಲಿ ಸ್ಥಳೀಯ ಟಿಎಂಸಿ ನಾಯಕರು ಮತ್ತು ಸರ್ಕಾರಕ್ಕೆ ಬೆದರಿಕೆ ಸಂದೇಶಗಳನ್ನು ಹೊಂದಿರುವ ಮಾವೋವಾದಿ ಪೋಸ್ಟರ್‌ಗಳು ಜಾರ್‌ಗ್ರಾಮ್ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಕಂಡುಬಂದಿವೆ. ಆ ಮೂಲಕ 11 ವರ್ಷಗಳ ಹಿಂದೆ ಕೊನೆಯಾಗಿದ್ದ ಎಡಪಂಥೀಯ ಉಗ್ರವಾದವು ಮತ್ತೆ ತಲೆ ಎತ್ತುತ್ತಿರುವ ಆತಂಕ ಪ್ರಾರಂಭವಾಗಿದೆ.

ಮಾವೋಯಿಸ್ಟ್‌ ರೀಜನ್‌ ಕಮಾಂಡರ್‌ ಮಾಲ್ಲೋಜಿ ಕೃಷ್ಣ ರಾವ್‌ ಅಲಿಯಾಸ್‌ ಕಿಶನ್‌ ಜೀ ಸಾವಿನ ನಂತರ ಎಡಪಂಥೀಯ ಉಗ್ರವಾದದ ಬಹುಪಾಲು ಚಟುವಟಿಕೆಗಳು ಕಡಿಮೆಯಾಗಿದ್ದವು ಆದರೆ ಪ್ರಸ್ತುತ ಚಟುವಟಿಕೆಗಳು ಕಾಣಿಸಿಕೊಳ್ಳುತ್ತಿದ್ದು ಕಟ್ಟೆಚ್ಚರ ವಹಿಸಲಾಗಿದೆ. ಜಂಗಲ್‌ ಮಹಲ್‌ನ ಒರಟು ಭೂ ಪ್ರದೇಶಗಳು ,ಪಶ್ಚಿಮ ಮಿಡ್ನಾಪುರ, ಪುರುಲಿಯಾ, ಬಂಕುರಾ, ಜಾರ್ಗ್ರಾಮ್ ಮತ್ತು ಬಿರ್ಭುಮ್ ಜಿಲ್ಲೆಗಳು ಕೆಂಪು ಉಗ್ರರ ಮೆಚ್ಚಿನ ಅಡಗುತಾಣಗಳು ಎಂದು ಹೇಳಲಾಗಿದೆ.

ಇದಕ್ಕೆಲ್ಲಾ ಮೂಲ ಕಾರಣ ಕಲ್ಲಿದ್ದಲು ಯೋಜನೆ
ರಾಜ್ಯ ಸರ್ಕಾರವು ಬಿರ್ಭುಮ್‌ನ ದಿಯೋಚಾ ಪಚಾಮಿಯಲ್ಲಿ ಕಲ್ಲಿದ್ದಲು ಗಣಿಗಾರಿಕೆಗಾಗಿ 35,000 ಕೋಟಿ ವೆಚ್ಚದಲ್ಲಿಯೋಜನೆ ಹಾಃಕಿಕೊಂಡಿದೆ. ಈ ಯೋಜನೆಗಾಗಿ 3,400 ಎಕರೆ ಭೂ ಪ್ರದೇಶವನ್ನು ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಆದರೆ ಈ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಬುಡಕಟ್ಟು ಜನಾಂಗದವರು ವಾಸವಿದ್ದಾರೆ. ಸ್ಥಳೀಯ 1 ಲಕ್ಷ ಯುವಕರಿಗೆ ಪುನರ್ವಸತಿ ಮತ್ತು ಭೂಮಿಗೆ ಪರಿಹಾರ ಜೊತೆಗೆ ಉದ್ಯೋಗ ಭರವಸೆ ನೀಡಿದ್ದರೂ ಸ್ಥಳೀಯರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇ ಘಟನೆಯೇ ಕೆಂಪು ಉಗ್ರರು ಪುನಃ ತಲೆ ಎತ್ತಲು ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಇದು ರಾಷ್ಟ್ರದ ಅತಿ ದೊಡ್ಡ ಕಲ್ಲಿದ್ದಲು ಯೋಜನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!