Monday, August 15, 2022

Latest Posts

ಮತೀಯವಾದಿಗಳನ್ನು ವೋಟ್ ಬ್ಯಾಂಕ್ ಮಾಡುವುದೇ ಎಡರಂಗದ ತಂತ್ರ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲ ಕುಟ್ಟಿ

ಹೊಸದಿಗಂತ ವರದಿ, ಮಂಜೇಶ್ವರ:

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಮರ್ಥವಾಗಿ ದೇಶವನ್ನು ಮುನ್ನಡೆಸುತ್ತಿದ್ದಾರೆ. ಆದರೆ ಕೇರಳದಲ್ಲಿ ಮತೀಯವಾದಿಗಳನ್ನು ಎಡರಂಗ ಒಕ್ಕೂಟವು ವೋಟ್ ಬ್ಯಾಂಕ್ ಮಾಡಲು ರಾಜಕೀಯ ತಂತ್ರ ಹೆಣೆಯುತ್ತಿದೆ. ಚರ್ಚ್ ನ ಗುರುಗಳು ನರ್ಕೋಟಿಕ್ ಜಿಹಾದ್ ಬಗ್ಗೆ ಹೇಳಿದರೆ ಕೇರಳದಲ್ಲಿ ಕೆಲವರು ಕುಂಬಳಕಾಯಿ ಕಳ್ಳರಂತೆ ವರ್ತಿಸುತ್ತಿದ್ದಾರೆ. ಇವರೇ ಮತೀಯವಾದಿಗಳು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ.ಅಬ್ದುಲ್ಲ ಕುಟ್ಟಿ ಹೇಳಿದ್ದಾರೆ.
ಬಿಜೆಪಿ ಬೂತ್ ಕಾರ್ಯಕರ್ತರು ಪ್ರಧಾನಿ ಮೋದಿಯವರಿಗೆ ಹುಟ್ಟುಹಬ್ಬದ ಸಂದೇಶ ತಿಳಿಸಿ ಹಾಗೂ ಕೋಟ್ಯಾಂತರ ಜನತೆಗೆ ಕೋವಿಡ್ ವ್ಯಾಕ್ಸಿನೇಷನ್ ಒದಗಿಸಿದ ಮೋದಿಯವರಿಗೆ ಕೃತಜ್ಞತೆ ತಿಳಿಸಿ ನಡೆಸುವ ಪೋಸ್ಟ್ ಕಾರ್ಡ್ ಅಭಿಯಾನದ ಕಾಸರಗೋಡು ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಮಂಜೇಶ್ವರದ ಮದನಂತೇಶ್ವರ ಅಂಚೆ ಕಚೇರಿಯಲ್ಲಿ ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾರಂಭದಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ವಕೀಲ ವಿ.ಬಾಲಕೃಷ್ಣ ಶೆಟ್ಟಿ , ವಕೀಲ ನವೀನ್ ರಾಜ್ ಕೆ.ಜೆ., ಬಾಬು ಮಾಸ್ಟರ್ ತೂಮಿನಾಡು, ಎಂ.ಹರಿಶ್ಚಂದ್ರ ಮಂಜೇಶ್ವರ, ಅಶ್ವಿನಿ ಎಂ.ಎಸ್.ಪಜ್ವ , ಸರೋಜಾ ಆರ್.ಬಲ್ಲಾಳ್, ರಾಜೇಶ್ ತೂಮಿನಾಡು, ಸಂತೋಷ್ ಅಡ್ಕ ಮೊದಲಾದವರು ಉಪಸ್ಥಿತರಿದ್ದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಆದರ್ಶ್ ಬಿ.ಎಂ.ಸ್ವಾಗತಿಸಿ, ಮಂಡಲ ಕಾರ್ಯದರ್ಶಿ ಸಂತೋಷ್ ರೈ ದೈಗೋಳಿ ವಂದಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss