ಲೆಜೆಂಡರಿ ಹಾಲಿವುಡ್ ಡೈರೆಕ್ಟರ್ ಪೀಟರ್ ಬೊಗ್ಡಾನವಿಚ್ ನಿಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಸ್ಕರ್ ಪ್ರಶಸ್ತಿ ಪುರಸ್ಕೃತ, ಹಾಲಿವುಡ್‌ನ ಲೆಜೆಂಡರಿ ನಿರ್ದೇಶಕ ಪೀಟರ್ ಬೊಗ್ಡಾನವಿಚ್ ಅವರು ನಿಧನರಾಗಿದ್ದಾರೆ.
ಹಲವಾರು ಜನಪ್ರಿಯ ಹಾಲಿವುಡ್ ಸಿನಿಮಾಗಳನ್ನು ಪೀಟರ್ ನಿರ್ದೇಶಿಸಿದ್ದಾರೆ. ನಿರ್ದೇಶನಕ್ಕೂ ಮುನ್ನ ವಿಮರ್ಶಕನಾಗಿ ಪೀಟರ್ ಎಲ್ಲರ ಮನ ಗೆದ್ದಿದ್ದರು. ಗ್ರ್ಯಾಮಿ, ಗೋಲ್ಡನ್ ಗ್ಲೋಬ್, ಆಸ್ಕರ್ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದರು.
ಪೀಟರ್ ಅವರ ನಿಧನಕ್ಕೆ ವಿಶ್ವದಾದ್ಯಂತ ಸಿನಿ ಗಣ್ಯರು ಸಂತಾಪ ಸೂಚಿಸಿದ್ದಾರೆ. ದಿ ಲಾಸ್ಟ್ ಪಿಕ್ಚರ್, ವಾಟ್ಸಪ್ ಡಾಕ್, ಪೇಪರ್ ಮೂನ್, ಸೇಂಟ್ ಜಾಕ್, ಮಾಸ್ಕ್ ಇವರ ಪ್ರಮುಖ ಸಿನಿಮಾಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!