Tuesday, July 5, 2022

Latest Posts

ವಿಧಾನ ಪರಿಷತ್ ಚುನಾವಣೆ| ಕಟ್ಟಾಳು ಪ್ರವೀಣ್ ಹಣಮಶೆಟ್ಟಿಗೆ ಒಲಿದ ಬೀದರ್ ಕಾಂಗ್ರೆಸ್ ಟಿಕೆಟ್

ಹೊಸದಿಗಂತ ವರದಿ, ಬೀದರ್:

ಡಿ. 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಬೀದರ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರವೀಣ್ ಹಣಮಶೆಟ್ಟಿ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಣೆ ಹಾಕಿದೆ.

ಪ್ರವೀಣ್ ಹಣಮಶೆಟ್ಟಿ ಪ್ರತಿಯೊಂದು ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಬೂತ್ ಮಟ್ಟದಲ್ಲಿ ಕೆಲಸ ಮಾಡಿ ಪಕ್ಷವನ್ನು ಸಂಘಟನೆ ಮಾಡಿ ಅಪಾರ ಜನಮನ್ನಣೆ ಗಳಿಸಿ ಬೀದರ್ ಜಿಲ್ಲೆಯಲ್ಲಿ ತನ್ನದೇ ಆದ್ ಛಾಪು ಮೂಡಿಸಿದ್ದಾರೆ. ಹಲವು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ವಿಜಯ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ.

ತಂದೆ ತಾಯಿ ಇಬ್ಬರು ವೃತ್ತಿಯಲ್ಲಿ ವೈದ್ಯರಾಗಿದ್ದು ಸಾಕಷ್ಟು ಬಡ ಜನರ ಸೇವೆ ಮಾಡಿ ಎಲ್ಲಾ ಜನರ ಮನ ಗೆದ್ದಿದ್ದಾರೆ. ಜೊತೆಗೆ ಇವರ ಮಡದಿ ಸಹ ಸ್ತ್ರೀ ರೋಗ ತಜ್ಞ ವೈದ್ಯರಾಗಿ ಬಡ ಜನರ ಸೇವೆಯಲ್ಲಿ ನಿರತರಾಗಿದ್ದಾರೆ. ಪ್ರವೀಣ್ ಹಣಮಶೆಟ್ಟಿ ಭಾರತ ಪಬ್ಲಿಕ್ ಸ್ಕೂಲ್ ಶಿಕ್ಷಣ ಸಂಸ್ಥೆಯ ಅಧ್ಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಂಗ್ರೆಸ್ ಹೈ-ಕಮಾಂಡ್ ಬೀದರ್ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹರ್ಷ ಮನೆ ಮಾಡಿದೆ ಪ್ರವೀಣ್ ಹಣಮಶೆಟ್ಟಿ ಅವರ ಗೆಲುವು ನಿಚ್ಚಿತವೆಂಬಂತೆ ವಾತಾವರಣ ಸಹ ನಿರ್ಮಾಣ ಆಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss