ಭಾರತೀಯ ಕ್ರಿಕೆಟ್‌ಗೆ ಹೆಮ್ಮೆ: ಇಂಗ್ಲೆಂಡ್‌ನ ಪ್ರಸಿದ್ಧ ಕ್ರೀಡಾಂಗಣಕ್ಕೆ ಟೀಮ್‌ ಇಂಡಿಯಾ ಲೆಜೆಂಡರಿ ಕ್ರಿಕೆಟಿಗನ ಹೆಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸುನೀಲ್‌ ಗವಾಸ್ಕರ್‌ ವಿಶ್ವ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟವರು. ಲಿಟ್ಲ್‌ ಮಾಸ್ಟರ್‌ ಎಂದೇ ಪ್ರಖ್ಯಾತರಾದ ಭಾರತದ ಮಾಜಿ ನಾಯಕ ಗವಾಸ್ಕರ್‌ ಹಲವು ದಾಖಲೆಗಳ ಒಡೆಯ. ಕ್ರಿಕೆಟ್‌ ಅಷ್ಟೇನು ಜನಪ್ರಿಯವಾಗಿಲ್ಲದ ಕಾಲದಲ್ಲಿ ಆಡಿ ಕ್ರಿಕೆಟ್‌ ಕ್ರೇಜ್‌ ಅನ್ನು ಮತ್ತೊಂದು ಮಜಲಿಗೆ ಕೊಂಡೊಯ್ದರು. ಶ್ರೇಷ್ಠ ಪ್ರದರ್ಶನ ತೋರಿದ ಆಟಗಾರರನ್ನು ಗವಾಸ್ಕರ್‌ ಗೆ ಹೋಲಿಸುವುದಿದೆ. ಗವಾಸ್ಕರ್‌ ಆಟಕ್ಕೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಕ್ರಿಕೆಟ್‌ ಗೆ ಗವಾಸ್ಕರ್‌ ನಲ್ಲಿಸಿದ ಸೇವೆಯನ್ನು ಪರಿಗಣಿಸಿ ಅವರಿಗೆ ಅತ್ಯುನ್ನತ ಗೌರವವೊಂದನ್ನು ಸಮರ್ಪಿಸಲಾಗುತ್ತಿದೆ. ಇಂಗ್ಲೆಂಡ್‌ ನಲ್ಲಿ ಪ್ರಸಿದ್ಧವಾಗ ಕ್ರಿಕೆಟ್‌ ಕ್ರೀಡಾಂಗಣವೊಂದು ಇನ್ನು ಮುಂದೆ ʼಸುನೀಲ್‌ ಗವಾಸ್ಕರ್‌ ಸ್ಟೇಡಿಯಂʼ ಎಂದು ಕರೆಸಿಕೊಳ್ಳಲಿದೆ.
ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ಕ್ರಿಕೆಟ್ ಮೈದಾನಕ್ಕೆ ಭಾರತದ ದಿಗ್ಗಜ ಬ್ಯಾಟರ್ ಸುನಿಲ್ ಗವಾಸ್ಕರ್ ಅವರ ಹೆಸರಿಡಲಾಗುತ್ತಿದೆ. ಈ ಕ್ರೀಡಾಂಗಣ ಇಷ್ಟು ದಿನಗಳ ಕಾಲ ಲೀಸೆಸ್ಟರ್‌ ಕ್ರೀಡಾಂಗಣವೆಂದು ಕರೆಸಿಕೊಳ್ಳುತ್ತಿತ್ತು. ಇದೀಗ ಆ ಹೆಸರನ್ನು ಬದಲಿಸಿ ಭಾರತೀಯ ಕ್ರಿಕೆಟ್‌ ದಂತಕಥೆಯ ಹೆಸರನ್ನು ಮರುನಾಮಕರಣ ಮಾಡಲಾಗುತ್ತಿದೆ.
ತನಗೆ ಸಲ್ಲಿಸಲಾದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿರುವ ಗವಾಸ್ಕರ್‌, “ಲೀಸೆಸ್ಟರ್ ಅಪ್ಪಟ ಕ್ರಿಕೆಟ್‌ ಬೆಂಬಲಿಗರನ್ನು ಹೊಂದಿರುವ ನಗರವಾಗಿದೆ, ವಿಶೇಷವಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದು ನಿಜಕ್ಕೂ ನನಗೆ ಸಂದ ದೊಡ್ಡ ಗೌರವವಾಗಿದೆ” ಎಂದು ಹೇಳಿದ್ದಾರೆ.
ಕ್ರೀಡಾಂಗಣಕ್ಕೆ ಗವಾಸ್ಕರ್‌ ಹೆಸರಿಡುವ ಹಿಂದೆ ಭಾರತೀಯ ಮೂಲದ ಯುಕೆ ಸಂಸದ ಕೀತ್ ವಾಜ್ ಅವರ ಅಪಾರ ಪರಿಶ್ರಮವಿದೆ.  ʼಮೈದಾನಕ್ಕೆ ಗವಾಸ್ಕರ್ ಹೆಸರನ್ನು ಇಡಲು ತೀರ್ಮಾನವಾದ ವಿಚಾರ ರೋಮಾಂಚನ ತಂದಿದೆʼ. ಅವರು ಕೇವಲ “ಲಿಟಲ್ ಮಾಸ್ಟರ್” ಅಲ್ಲ; ಅವರು ಆಟದ ಮಹಾನ್ ಮಾಸ್ಟರ್ʼ ಎಂದು ಕೀಚ್‌ ಸಂಭ್ರಮ ಹಂಚಿಕೊಂಡಿದ್ದಾರೆ.

ವಿಶೇಷ ದಾಖಲೆಗಳ ಒಡೆಯ ಗವಾಸ್ಕರ್..
ಗವಾಸ್ಕರ್ ಟೆಸ್ಕ್‌ ನಲ್ಲಿ 51.12  ಸರಾಸರಿಯನ್ನು ಹೊಂದಿದ್ದು, ಅವರ ಪ್ರತಿಭೆಗೆ ಸಾಕ್ಷಿಯಾಗಿದೆ. ಅವರು ಟೆಸ್‌ ಕ್ರಿಕೆಟ್‌ ಇತಿಹಾಸದಲ್ಲೇ 10,000 ರನ್ ಕಲೆಹಾಕಿದ ವಿಶ್ವದ‌ ಮೊದಲ ಬ್ಯಾಟ್ಸ್‌ ಮನ್ ಎಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 125 ಟೆಸ್ಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಬರೋಬ್ಬರಿ 34 ಶತಕಗಳನ್ನು ಸಿಡಿಸಿದ್ದಾರೆ. 108 ಏಕದಿನ ಪಂದ್ಯಗಳಲ್ಲಿ ಪಂದ್ಯಗಳಲ್ಲಿ 3092 ರನ್ ಗಳಿಸಿ ಛಾಪು ಮೂಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!