ನೆಮ್ಮದಿ ವಾತಾವರಣಕ್ಕಾಗಿ ಮಲಗುವ ಕೋಣೆಯಲ್ಲಿ ಈ ಹಣ್ಣು ಇರಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿಂಬೆಹಣ್ಣು ಅಡುಗೆಗಷ್ಟೇ ಅಲ್ಲದೆ ಮನೆಯ ನೆಮ್ಮದಿಯ ವಾತಾವರಣ ಹಾಗೂ ಆರೋಗ್ಯಕ್ಕೂ ಅಷ್ಟೇ ಉಪಕಾರಿ. ಇದು ವಿಟಮಿನ್ ಸಿ, ಕ್ಯಾಲ್ಸಿಯಂ, ರಂಜಕ, ಮೆಗ್ನೀಸಿಯಮ್, ವಿಟಮಿನ್ ಬಿ, ಪ್ರೋಟೀನ್ಗಳು ಮತ್ತು ಕಾರ್ಬೋಹೈಡ್ರೇಟ್ಗಳನ್ನು ಸಮೃದ್ಧವಾಗಿ ಒಳಗೊಂಡಿರುತ್ತದೆ. ಮನೆಯಲ್ಲಿ ಕ್ರಿಮಿ ಕೀಟಗಳ ಹತೋಟಿಗೆ ತರಲು ನಿಂಬೆ ರಸ ಪ್ರಮುಖ ಪಾತ್ರ ವಹಿಸುತ್ತದೆ. ಈ ಸ್ವನ್ನು ಚಿಕ್ಕ ಪಾತ್ರೆಯಲ್ಲಿರಿಸಿ ಕೀಟಗಳಿರುವ ಜಾಗದಲ್ಲಿಟ್ಟರೆ ಕೀಟಗಳು ಅಲ್ಲಿಂದ ಮಂಗ ಮಾಯವಾಗುತ್ತವೆ.

ವಿಶೇಷವಾಗಿ ಮಲಗುವ ಮೊದಲು ನಿಂಬೆ ಚೂರುಗಳನ್ನು ಹಾಕಿದರೆ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು. ರೂಂ ಫ್ರೆಶರ್‌ ಕೂಡ ಅಗತ್ಯವಿರುವುದಿಲ್ಲ. ನಿಂಬೆ ರಸದ ಸುವಾಸನೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ.

ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ಕೋಣೆಯಲ್ಲಿ ನಿಮ್ಮನ್ನು ಇಟ್ಟುಕೊಳ್ಳುವುದರಿಂದ ಉತ್ತಮ ಪ್ರಯೋಜನ ಲಭ್ಯವಾಗುತ್ತದೆ. ಮಲಗುವ ಕೋಣೆಯಲ್ಲಿ ನಿಂಬೆ ಹೋಳುಗಳನ್ನು ಹಾಕುವುದರಿಂದ ಉಸಿರಾಟದ ಸಮಸ್ಯೆ ಹಾಗೂ ಮೂಗು ಕಟ್ಟಿಕೊಳ್ಳುವುದನ್ನು ತಡೆಯಬಹುದು. ಇದರಿಂದ ಬರುವ ಪರಿಮಳ ಮನಸ್ಸನ್ನು ಶಾಂತಗೊಳಿಸುವ ಜೊತೆಗೆ ಒತ್ತಡವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಇದು ಆತಂಕ, ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಸಕಾರಾತ್ಮಕ ಆಲೋಚನೆಗಳು, ಬರುವಂತೆ ಮಾಡುತ್ತದೆ. ಮನೆಯಲ್ಲಿರುವ ನೊಣ, ಸೊಳ್ಳೆ ಹಾಗೂ ಇತರೆ ಕೀಟಗಳನ್ನು ಹಿಮ್ಮೆಟ್ಟಿಸುವ ಶಕ್ತಿ ನಿಂಬೆ ರಸಕ್ಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!