Monday, October 2, 2023

Latest Posts

ಹಾವೇರಿಯಲ್ಲಿ ಚಿರತೆ ಪ್ರತ್ಯಕ್ಷ: ಜನರಲ್ಲಿ ಮೂಡಿದ ಆತಂಕ

ಹೊಸದಿಗಂತ ವರದಿ ಹಾವೇರಿ:

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ದೇವಿಹೊಸುರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ದೇವಿಹೊಸುರ ಗ್ರಾಮದ ಗೌರಾಪುರ ಹತ್ತಿಮಿಲ್ ಬಳಿ ಚಿರತೆ ಪ್ರತ್ಯಕ್ಷವಾಗಿದೆ. ಚಿರತೆ ಬಂದಿರುವುದನ್ನು ಕಂಡು ಹೊಲದಲ್ಲಿದ್ದ ಕೆಲಸದವರು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ.

ಗ್ರಾಮಸ್ಥರು ಈ ಕುರಿತು ಅರಣ್ಯ ಇಲಾಖೆಯವರ ಗಮನಕ್ಕೆ ತಂದಿದ್ದಾರೆ. ಆದರೆ ಗ್ರಾಮದಲ್ಲಿನ ಜನತೆ ಓಡಾಡುವದಕ್ಕೂ ಅಂಜಿಕೊಳ್ಳುತ್ತಿದ್ದಾರೆ. ಈ ಚಿರತೆಯನ್ನು ಬೇಗನೆ ಬಲೆಗೆ ಕೆಡವಿ ಜನತೆಯಲ್ಲಿನ ಆತಂಕವನ್ನು ದೂರ ಮಾಡಿ ಎಂದು ಗ್ರಾಮದವರು ಆಗ್ರಹಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!