ಕಾಂಗ್ರೆಸ್ ನಾಯಕರು ಮೊದಲು ಆರ್ ಎಸ್ ಎಸ್ ಇತಿಹಾಸ ತಿಳಿದುಕೊಳ್ಳಲಿ: ಎಚ್ ಜಿ ಗಿರಿಧರ್

ಹೊಸದಿಗಂತ ವರದಿ ಮೈಸೂರು:

ಕಾಂಗ್ರೆಸ್‌ನವರು ಬಿಜೆಪಿ ಬೆಳೆಯುವುದನ್ನು ಸಹಿಸದೆ ಹೊಟ್ಟೆಕಿಚ್ಚಿನಿಂದ ಆರ್‌ಎಸ್‌ಎಸ್ ಕುರಿತು ಮಾತನಾಡುವುದನ್ನು ನೋಡಿದರೆ, ಕಾಂಗ್ರೆಸ್ ನಾಯಕರಲ್ಲಿ ಬೌದ್ಧಿಕ ದಿವಾಳಿತನ ಎದ್ದು ಕಾಣುತ್ತಿದೆಎಂದು ಬಿಜೆಪಿ ಮೈಸೂರು ನಗರ ಪ್ರಧಾನ ಕಾರ್ಯದರ್ಶಿ ಎಚ್ ಜೆ ಗಿರಿಧರ್ ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಾ ಸಂಘ ವಿರೋಧ ಮಾಡಿ ಬಣವನ್ನು ನಿರ್ಮಾಣ ಮಾಡುತ್ತೇವೆ. ಎಂದು ಕಾಂಗ್ರೆಸ್ ನಾಯಕರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಭಾರತವನ್ನು ವಿಶ್ವ ಗುರುವನ್ನಾಗಿಸಲು ಸಂಘಟನೆಯು ವೈದ್ಯಕೀಯ ಸೇವೆ, ಸ್ವದೇಶಿ ಅಭಿಯಾನ ತತ್ವದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ ವಿಚಾರಗಳನ್ನು ನೀಡುತ್ತದೆ.
ಅಲ್ಲದೆ ಹಿಂದೂ ಸಂಸ್ಕೃತಿಯನ್ನು ಸಂರಕ್ಷಿಸಲು, ಲವ್ ಜಿಹಾದ್ ವಿರುದ್ಧ ಹೋರಾಡುತ್ತಿದೆ. ನೆರೆಹಾವಳಿಸಂದರ್ಭದಲ್ಲಿ ಜೀವವನ್ನು ಮುಡಿಪಾಗಿಟ್ಟು ಯಾವುದೇ ಫಲಾಪೇಕ್ಷೆ ಇಟ್ಟುಕೊಳ್ಳದೆ ಸೇವೆಸಲ್ಲಿಸುತ್ತಾರೆ. ಇದರ ಅರಿವಿಲ್ಲದೆ ವಿರೋಧ ಪಕ್ಷದವರು ಅನಗತ್ಯವಾಗಿ ಮಾತನಾಡುವುದನ್ನು ನೋಡಿದರೆ, ಅವರಿಗೆ ದೇಶದ ಜನರಿಗಾಗಿ ಸೇವೆ ಮಾಡುವುದು ಬೇಕಾಗಿಲ್ಲ ಅನಿಸುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ಟೀಕಿಸಿದ್ದಾರೆ.

ರಾಜಕೀಯವಾಗಿ ಪರಸ್ಪರ ಪಕ್ಷವನ್ನು ಟೀಕಿಸುವುದರಲ್ಲಿ ತಪ್ಪೇನಿಲ್ಲ. ಆದರೆ, ಜನರಿಗೆ ದೇಶಭಕ್ತಿಯ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಶ್ರಮಿಸುತ್ತಿರುವ ಪ್ರತಿಯೊಬ್ಬ ದೇಶಪ್ರೇಮಿಯ ಮನಸ್ಸಿಗೆ ತುಂಬಾ ನೋವನ್ನುಂಟು ಮಾಡಿದೆ. ರಾಜಕೀಯವಾಗಿ ಏನೂ ಬೇಕಾದರೂ ಮಾತನಾಡಬಹುದು ಎನ್ನುವ
ಭ್ರಮೆಯಲ್ಲಿರುವ ಕಾಂಗ್ರೆಸ್ ನಾಯಕರು ಮೊದಲು ಆರ್‌ಎಸ್‌ಎಸ್ ಸಮಾಜ ಸೇವೆಯ ಬಗ್ಗೆ ತಿಳಿದು ಮಾತನಾಡಬೇಕು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!