Wednesday, August 10, 2022

Latest Posts

ಪ್ರತಿಭೆಗಳನ್ನು ಗುರುತಿಸುವ ಕೆಲಸ ಶಿಕ್ಷಣ ಸಂಸ್ಥೆಗಳು ಮಾಡಲಿ: ಸಿಎಂ ಯಡಿಯೂರಪ್ಪ ಸಲಹೆ

ಹೊಸದಿಗಂತ ವರದಿ, ಶಿವವೊಗ್ಗ:

ಎಲ್ಲರಲ್ಲೂ ತಮ್ಮದೇ ಆದ ವ್ಯಕ್ತಿತ್ವ, ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್ . ಯಡಿಯೂರಪ್ಪ ಸಲಹೆ ನೀಡಿದರು.
ನಗರದ ಹಳೆ ಜೈಲು ಆವರಣದಲ್ಲಿ ನನ್ನೊಲುಮೆ, ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಕೇವಲ ಪದವಿ ನೀಡುವುದು ಮಾತ್ರವಲ್ಲ. ಅವರಲ್ಲಿನ ಅಂತಃಸತ್ವ ಗುರುತಿಸಿ, ಬೆಳೆಸಿ ನಾಡಿನ ಸತ್ಪ್ರಜೆ ಮಾಡುವ ದೊಡ್ಡ ಕಾರ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಮೂಡಬಿದಿರೆಯ ಆಳ್ವಾ್ ಶಿಕ್ಷಣ ಸಂಸ್ಥೆಯಲ್ಲಿ 20 ಸಾವಿರ ವಿದ್ಯಾರ್ಥಿಗಳು ಇದ್ದಾರೆ. ಅದರಲ್ಲಿ 18 ಸಾವಿರ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಇದ್ದಾರೆ. ಅನೇಕರು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಒಮ್ಮೆ ಆಳ್ವಾಸ್ ನೋಡಿ ಬಂದರೆ  ಭಾವಿ ಸತ್ಪ್ರಜೆಗಳ ನಿರ್ಮಾಣ, ನಾಡಿಗೆ ಹೆಮ್ಮೆ ತರುವ ವ್ಯಕ್ತಿಗಳ ನಿರ್ಮಾಣ ಹೇಗೆ ಎಂಬುದನ್ನು ತಿಳಿಯಬಹುದು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss