ಕಾಶ್ಮೀರದಲ್ಲಿ ಆರು ಮಂದಿ ಎಲ್‌ಇಟಿ ಭಯೋತ್ಪಾದಕರು ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಿಷೇಧಿತ ಸಂಘಟನೆ ಲಷ್ಕರ್-ಎ-ತೊಯ್ಬಾದೊಂದಿಗೆ ಸಂಪರ್ಕ ಇರಿಸಿಕೊಂಡು ಉಗ್ರ ಚಟುವಟಿಕೆಗಳಲ್ಲಿ ತೊಡಗಿದ್ದ ಆರು ಮಂದಿಯನ್ನು ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ.
ಪುಲ್ವಾಮದ ಲೆಲ್ಹರ್ ಕಾಕಪೋರಾ ನಿವಾಸಿ ರೂಫ್‌ ಅಹ್ಮದ್‌ ಲೋನ್‌, ಆಲೋಚಿಬಾಗ್‌ ಪಾಂಪೊರೆ ನಿವಾಸಿ ಆಕಿಬ್‌ ಮಕ್ಬೂಲ್‌ ಭಟ್‌, ಲಾರ್ವೆ ಕಾಕಪೋರಾ ನಿವಾಸಿಗಳಾದ ಜಾವೇದ್‌ ಅಹ್ಮದ್‌ ದಾರ್‌,ಸಜಾದ್‌ ಅಹ್ಮದ್‌ ದಾರ್‌, ಪುಲ್ವಾಮದ ಪರಿಗಾಮ್‌ ನಿವಾಸಿಗಳಾದ ಅರ್ಷಿದ್‌ ಅಹ್ಮದ್‌ ಮಿರ್‌, ರಮೀಜ್‌ ರಾಜಾ ಬಂಧಿತರು.
‘ಬಂಧಿತರು ಉಗ್ರರಿಗೆ ಆಶ್ರಯ ನೀಡಿದ್ದಲ್ಲದೆ, ಹಣಕಾಸು ಸಹಾಯ, ಹಣ ವರ್ಗಾವಣೆ ಗೆ ಸಹಾಯ ಮಾಡುತ್ತಿದ್ದುದಲ್ಲದೆ ಯುವಕರನ್ನು ಉಗ್ರ ಚಟುವಟಿಕೆಗೆ ಸೆಳೆಯುವ ಕೃತ್ಯದಲ್ಲಿ ತೊಡಗಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಬಂಧಿತರು ಎಲ್‌ಇಟಿಯ ಭಯೋತ್ಪಾದಕ ಕಮಾಂಡರ್ ರಿಯಾಜ್ ಅಹ್ಮದ್ ದಾರ್ ನಿರ್ದೇಶನದಂತೆ ಕಾರ್ಯ ನಿರ್ವಹಿಸುತ್ತಿದ್ದರು ಮತ್ತು ಅತನೊಂದಿಗೆ ನಿರಂತರ ಸಂಪರ್ಕದಲಿದ್ದು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!