Monday, March 1, 2021

Latest Posts

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇನ್ನಾದರೂ ಕಲ್ಲು ಗಣಿಗಾರಿಕೆಗೆ ಕಡಿವಾಣ ಬೀಳಲಿ: ಜನಾಕ್ರೋಶ

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:

ತಾಲೂಕಿನ ಮಂಡಿಕಲ್ ಹೋಬಳಿ ಹಿರೇನಾಗವೇಲಿ ಬಳಿ ಜೊನ್ನಲಕುಂಟೆಯಲ್ಲಿ ಕಲ್ಲು ಗಣಿಕಾರಿಕೆಯಲ್ಲಿ ಜಿಲೆಟಿನ್ ಸ್ಫೋಟಗೊಂಡು ಆರು ಮಂದಿ ಸಾವನ್ನಪ್ಪಿರು ಘಟನೆಯಿಂದ ಜಿಲ್ಲೆಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಗಳಿಗೆ ಇನ್ನಾದರೂ ಕಡಿವಾಣ ಹಾಕಿ ಎಂಬ ಜನಾಕ್ರೋಶ ವ್ಯಕ್ತವಾಗಿದೆ.

ಘಟನೆ ಆಘಾತದಿಂದ ಸ್ಥಳೀಯ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಹಿರೇನಾಗವೇಲಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ಸ್ಥಳಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಜನರ ಅಳಲು ಕಲ್ಲು ಹೃದಯದವರು ಕರುಳನ್ನೂ ಸಹ ಕಿವುಚುವಂತಿದೆ.

ಯಾವಾಗ ಮನೆ ಕುಸಿದು ಬೀಳುತ್ತೆ ಅನ್ನೋ ಭಯದಲ್ಲಿದ್ದೇವೆ.. ರಾತ್ರಿಗಳಲ್ಲಿ ನೆಮ್ಮದಿಯಿಂದ ಮಲಗಲು ಸಾಧ್ಯವಾಗುತ್ತಿಲ್ಲ. ಹೇಗಾದರೂ ಮಾಡಿ ದಯವಿಟ್ಟು ಗಣಿಗಾರಿಕೆ ನಿಲ್ಲಿಸಿ, ನೆಮ್ಮದಿಯಾಗಿ ಬದುಕಲು ಬಿಡಿ ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಈಗಾಗಲೇ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ದೆವೆ ಆದರೆ ನಮ್ಮ ಮನವಿಗೆ ಬೆಲೆಯಿಲ್ಲ. ಎಷ್ಟೇ ಮನವಿ ಮಾಡಿದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪ್ರತಿದಿನ ಪ್ರತಿಕ್ಷಣ ಆತಂಕದಲ್ಲಿ ದಿನ ಕಳೆಯುತ್ತಿದ್ದೇವೆ. ನಮಗೆ ನೆಮ್ಮದಿಯಿಂದ ಜೀವನ ಸಾಗಿಸಲು ಅನುಕೂಲ ಮಾಡಿಕೊಡಿ. ಇನ್ನಾದರೂ ಗಣಿಗಾರಿಕೆ ನಿಲ್ಲಿಸಿ ಎಂದು ಸ್ಥಳಿಯರು ಮನವಿ ಮಾಡಿಕೊಂಡಿದ್ದಾರೆ.

2030ರವರೆಗೂ ಇದೆ ಪರವಾನಗಿ!
ಚಿಕ್ಕಬಳ್ಳಾಪುರದ ಹಿರೇನಾಗವೇಲಿ ಬಳಿ ಜಿಲೆಟಿನ್ ಸ್ಫೋಟದ ಹಿನ್ನೆಲೆಯಲ್ಲಿ ಭ್ರಮರವಾಸಿನಿ ಕ್ರಷರ್​ಗೆ 2030 ರವರೆಗೂ ಪರವಾನಗಿ ಇದೆ. ಕ್ರಷರ್ ನಡೆಸಲು ಗಣಿ & ಭೂ ವಿಜ್ಞಾನ ಇಲಾಖೆ ಅನುಮತಿ ಪಡೆದುಕೊಳ್ಳಲಾಗಿದ್ದು, ಜೊನ್ನಲಕುಂಟೆಯ ಹಳೇ ಸರ್ವೆ ನಂ. 11, ಹೊಸ ಸರ್ವೆ ನಂ. 24 ನಲ್ಲಿ 3 ಎಕರೆ 10 ಗುಂಟೆಯಲ್ಲಿ ಕ್ರಷರ್ ನಡೆಸಲು ಅನುಮತಿ ಇದೆ ಎಂದು ತಿಳಿದುಬಂದಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!