Wednesday, August 17, 2022

Latest Posts

ಅವ್ಯವಹಾರದ ಆರೋಪ ಮಾಡುವವರು ಸಾಬೀತು ಮಾಡಲಿ: ಸಚಿವ ಬಿ.ಸಿ.ಪಾಟೀಲ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ,ಚಿತ್ರದುರ್ಗ :

ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆರೋಪ ಮಾಡುವವರು ಅದನ್ನು ಸಾಬೀತು ಮಾಡಬೇಕು. ತಪ್ಪಿದಲ್ಲಿ ಆರೋಪ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
ಹಿರಿಯೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಧ್ಯವರ್ತಿಳು, ಏಜೆಂಟರನ್ನು ದೂರ ಇಟ್ಟಾಗ ಆರೋಪ ಬರುವುದು ಸಹಜ. ನಮ್ಮಲ್ಲಿ ಎಲ್ಲ ವ್ಯವಹಾರಗಳು ಆನ್‌ಲೈನ್ ಮೂಲಕ ನಡೆಯುತ್ತವೆ. ಹಾಗಾಗಿ ಒಂದು ಪೈಸೆಯೂ ಅವ್ಯವಹಾರ ಆಗಿಲ್ಲ. ಈ ಕುರಿತು ಯಾವುದೇ ತನಿಖೆಗೂ ಸಿದ್ಧ ಎಂದರು.
ರಾಜ್ಯದಲ್ಲಿರುವುದು ಜನ ವಿರೋಧಿ ಸರ್ಕಾರ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರು ಜನಪರವಾಗಿ ಇದಿದ್ದರೆ ಜನ ಯಾಕೆ ತಿರಸ್ಕಾರ ಮಾಡುತ್ತಿದ್ದರು. ಅವರು ವಿಪಕ್ಷದಲ್ಲಿ ಇರುತ್ತಾರೆ. ಮುಂದೆಯೂ ಈಕಡೆ ಬರುವ ಸಾಧ್ಯತೆ ಇಲ್ಲ. ೨೦೨೩ ರಲ್ಲಿ ಮತ್ತೆ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ತಿರುಗೇಟು ನೀಡಿದರು.
ಭಾರತ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ದೇಶದಲ್ಲಿ ಯಾವುದೇ ರೈತ ವಿರೋಧಿ ಕಾಯಿದೆ ಇಲ್ಲ. ಸರ್ಕಾರ ಎಂಎಸ್‌ಪಿಗೆ ಹೆಚ್ಚು ಒತ್ತು ನೀಡುತ್ತಿದೆ. ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಇದು ಯಾವ ರೈತ ವಿರೋಧಿ ನೀತಿ. ಎಲ್ಲ ಕಾಯಿದೆಗಳು ರೈತ ಪರವಾಗಿಯೇ ಇವೆ. ಆದರೆ ಕೆಲವರು ದುರುದ್ದೇಶದಿಂದ ಹೀಗೆ ಮಾಡುತ್ತಿದ್ದಾರೆ ಎಂದರು.
ಹಿರಿಯೂರಿನಲ್ಲಿ ಸಬ್‌ಇನ್‌ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದೆ. ಹಾಗಾಗಿ ಹಿರಿಯೂರಿನ ಮೇಲೆ ನನಗೆ ವಿಶೇಷ ಪ್ರೀತಿ. ಆದರೆ ನನಗೆ ಹಿರಿಯೂರಿನಿಂದ ಸ್ಪರ್ಧೆ ಮಾಡುವ ಯಾವುದೇ ಉದ್ದೇಶವಿಲ್ಲ. ನನಗೆ ನನ್ನ ಕ್ಷೇತ್ರ ಗಟ್ಟಿಯಾಗಿದೆ. ನನ್ನ ಕ್ಷೇತ್ರದ ಜನರು ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಶಾಸಕಿ ಪೂರ್ಣಿಮಾ ಅವರು ಆಹ್ವಾನಿಸಿದ್ದರಿಂದ ಕಾರ್ಯಕ್ರಮಕ್ಕೆ ಬಂದಿದ್ದೇನೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!