Sunday, August 14, 2022

Latest Posts

ಮಠಗಳು ಸಂಸ್ಕಾರ ಕೇಂದ್ರಗಳಾಗಲಿ: ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ

ಹೊಸದಿಗಂತ ವರದಿ, ಮಂಡ್ಯ:

ಮಠಗಳನ್ನು ಸಂಸ್ಕಾರಕ್ಕಾಗಿ ಸ್ಥಾಪಿಸಲಾಗಿದ್ದು ಆದ್ದರಿಂದ ಮಠಗಳು ಸಂಸ್ಕಾರ ಕೇಂದ್ರವಾಗಲಿ ಎಂದು ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದ ನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ತಂಡಸನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಶಂಕರಮಠವನ್ನು ಉದ್ಘಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಮಠಗಳು ಎಂದರೆ ಬಹಳಷ್ಟು ಜನರಲ್ಲಿ ಅಲರ್ಜಿ ಎಂಬ ಭಾವನೆ ಇದೆ, ಮೊಬೈಲ್, ಟಿವಿ ನೋಡಿ ಮನರಂಜನೆಗೊಳ್ಳುತ್ತಿರುವ ಸಮಯದಲ್ಲಿ ವೇದಾಂತ ಕೇಳುವವರು ಯಾರು ಎಂಬ ಭಾವನೆ ಬರುತ್ತಿದೆ ಎಂದರು
ಸುಂದರವಾದ ಪರಿಸರದಲ್ಲಿ ಶಂಕರಮಠ ಕಟ್ಟಿದ್ದಾರೆ ಪ್ರತಿದಿನ ಒಂದು ಗಂಟೆಯಾದರೂ ಪ್ರತಿಯೊಬ್ಬರೂ ಮಠಕ್ಕೆ ಭೇಟಿಕೊಟ್ಟು ಮನಸ್ಸನ್ನು ಶಾಂತಗೊಳಿಸಿಕೊಳ್ಳಿ ಎಂದರು.
ಮಠಗಳಲ್ಲಿ ಭಕ್ತಿ, ಜ್ಞಾನ, ಗೌರವ ಶ್ರೇಷ್ಠವಾದದ್ದು. ಶ್ರದ್ಧೆಯಿಂದ ಯಾರು ಜ್ಞಾನ ಹೊಂದುತ್ತಾರೋ ಅವರು ಮುಂದಿನ ದಿನಗಳಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ನಿಲ್ಲುತ್ತಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss