ಪ್ರತಿಯೊಂದು ಮನೆಯ ಎದುರು ರಾಷ್ಟ್ರ ಧ್ವಜ ಹಾರಲಿ: ಗೃಹ ಸಚಿವ ಆರಗ ಜ್ನಾನೇಂದ್ರ

ಹೊಸದಿಗಂತ ವರದಿ,ಶಿವಮೊಗ್ಗ:

ಸ್ವಾತಂತ್ರ್ಯ ಹೋರಾಟದ ತ್ಯಾಗ ಬಲಿದಾನ ಮಾಡಿದವರಿಗೆ ವಿಶೇಷ ಗೌರವ ಸಲುವಾಗಿ ಪ್ರತಿಯೊಂದು ಮನೆಯ ಎದುರು ಭಾಗದಲ್ಲಿ ರಾಷ್ಟ್ರ ಧ್ವಜವನ್ನು ಹಾರಿಸಬೇಕು. ಹಣವನ್ನು ಕೊಟ್ಟು ಧ್ವಜವನ್ನು ಹಾರೈಸುತ್ತೇನೆ ಎಂಬ ಭಾವನೆ ಜನರಿಗೆ ಬರಬೇಕು, ಬಡವ ಶ್ರೀಮಂತ ಎಂದು ನೋಡದೆ ರಾಷ್ಟ್ರಕ್ಕಾಗಿ ಧ್ವಜವನ್ನು ಹಾರಿಸಬೇಕು ಎಂದು ಗೃಹ ಸಚಿವ ಆರಗ ಜ್ನಾನೇಂದ್ರ ಹೇಳಿದರು.
ತೀರ್ಥಹಳ್ಳಿ
ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ನಡೆದ ಕೆ ಡಿ ಪಿ ಸಭೆಯಲ್ಲಿ ಮಾತನಾಡಿ,
ಈಗ ಬೊಮ್ಮಾಯಿ ಸರ್ಕಾರಕ್ಕೆ 1 ವರ್ಷದ ಸಂಭ್ರಮ ಆಗಿತ್ತು. ಆದರೆ ಕೆಲವು ಘಟನೆಗಳಿಂದ ಸಂಭ್ರಮಾಚರಣೆ ನೆಡೆಸಲು ಬೇಡ ಎಂದು ತೀರ್ಮಾನಿಸಲಾಯಿತು ಎಂದರು.
ತಾಲೂಕಿಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ತಂದಿದ್ದೇವೆ.
ಕೊರೊನ ಸಂದರ್ಭದಲ್ಲಿ ಸೇವೆ ಸಲ್ಲಿಸಿದ   ಎಲ್ಲಾ ಅಧಿಕಾರಿಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ. ವಿಶೇಷವಾಗಿ ಅರೋಗ್ಯ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು ಬಹಳ ಕಷ್ಟಪಟ್ಟು ಕೆಲಸಗಳನ್ನು ನಿರ್ವಹಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಹಿಂದಿನ ಅವದಿಯ ತಹಸೀಲ್ದಾರ್ ಡಾ. ಶ್ರೀಪಾದ್ ಅವರನ್ನು ನೆನೆಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಅಮೃತ್ ಅತ್ರೇಶ್, ತಾಲೂಕು ಪಂಚಾಯತ್ ನಿರ್ವಹಣಾಧಿಕಾರಿ ಶೈಲಾ, ಸೇರಿದಂತೆ ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!