ಒಂದೆಡೆ ಬಿರು ಬೇಸಿಗೆ, ಇನ್ನೊಂದೆಡೆ ಮಾವಿನ ಕಾಯಿ ಸೀಸನ್. ವ್ಹಾ ಎಂಥಾ ಕಾಂಬಿನೇಷನ್. ಬೇಸಿಗೆಯಲ್ಲಿ ಮಾವಿನ ಕಾಯಿ ಅಡುಗೆ ಬಹಳ ರುಚಿ ಕೊಡುತ್ತದೆ. ಅದರಲ್ಲೂ ಈ ಮಂದನ ಗೊಜ್ಜು ಮತ್ತು ರುಚಿ. ಇದನ್ನು ಬಹಳ ಸಿಂಪಲ್ ಆಗಿ, ಬೇಗ ಮಾಡುವ ರೆಸಿಪಿ ಇದು. ಅದರಲ್ಲೂ ಸಿಹಿ ಇಷ್ಟವಾಗುವವರಿಗೆ ಇದು ಬಹಳ ರುಚಿಯಾಗುತ್ತದೆ.
ಬೇಕಾಗುವ ಸಾಮಗ್ರಿ:
ಮಾವಿನ ಕಾಯಿ
ಬೆಲ್ಲ
ಬೆಳ್ಳುಳ್ಳಿ
ಸಾಸಿವೆ
ಇಂಗು
ಉದ್ದಿನಬೇಳೆ
ಉಪ್ಪು
ಕರಿಬೇವು
ಮಾಡುವ ವಿಧಾನ:
- ಮೊದಲಿಗೆ 2 ಮಾವಿನ ಕಾಯಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ.
- ಬೇಯಿಸಿಕೊಂಡ ಮಾವಿನ ಕಾಯಿಯನ್ನು ಕೈಯಿಂದ ಕಿವುಚಿ ಪೇಸ್ಟ್ ಮಾಡಿಕೊಳ್ಳಿ. ಗೊರಟೆ ಸಿಪ್ಪೆ ತೆಗೆದು ಬಿಡಿ.
- ಮಾವಿನ ಕಾಯಿ ಪೇಸ್ಟ್’ಗೆ ಸ್ವಲ್ಪ ನೀರು, ಮತ್ತು ಬೆಲ್ಲ, ಖಾರ ಪುಡಿ, ಉಪ್ಪು ಹಾಕಿ ಕುದಿಯಲು ಬಿಡಿ.
- ಚೆನ್ನಾಗಿ ಕುದ್ದ ಮೇಲೆ ಅದಕ್ಕೆ ಎಣ್ಣೆ, ಬೆಳ್ಳುಳ್ಳಿ, ಸಾಸಿವೆ, ಉದ್ದಿನಬೇಳೆ, ಇಂಗು, ಕರಿಬೇವಿನ ಒಗ್ಗರಣೆ ಮಾಡಿ ಹಾಕಿದರೆ ಮಾವಿನಕಾಯಿ ಮಂದನ ಗೊಜ್ಜು ರೆಡಿ.