Wednesday, July 6, 2022

Latest Posts

ಇಡೀ ವಿಶ್ವದಿಂದ ಕೊರೋನಾ ತೊಲಗಲಿ: ಯುಗಾದಿ ಶುಭಾಷಯ ತಿಳಿಸಿದ ನವರಸ ನಾಯಕ ಜಗ್ಗೇಶ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಡೀ ವಿಶ್ವದಿಂದ ಕೊರೋನಾದಿಂದ ಮುಕ್ತಿ ಪಡೆದು ಎಲ್ಲರೂ ಕ್ಷೇಮ ಹಾಗೂ ಆರೋಗ್ಯವಾಗಿರಲಿ ಎಂದು ನವರಸ ನಾಯಕ ಜಗ್ಗೇಶ್ ಯುಗಾದಿ ಹಬ್ಬದ ಶುಭಾಷಯ ತಿಳಿಸಿದ್ದಾರೆ.

ಈ ಬಗ್ಗೆ ಇನ್ಸ್ ಟಾಗ್ರಾಂ ನಲ್ಲಿ ಶುಭಕೋರಿದ ಅವರು, ತಂದೆತಾಯಿ ರಾಯರ ಕೃಪೆಯಿಂದ ಈ ಸಂವತ್ಸರ ಸಮಸ್ತ ಮನುಕುಲದಮನೋವಾಂಛ ಫಲಗಳನ್ನು ಈಡೇರಿಸಿ ನಮ್ಮನ್ನು ಕಾಡುತ್ತಿರುವ ಕೊರೋನಾ ವಿಶ್ವದಿಂದ ತೊಲಗಿ, ಕ್ಷೇಮ, ವಿಜಯ, ಆಯು ಆರೋಗ್ಯ ಮಳೆ, ಬೆಳೆ, ಧನಕನಕ ವಸ್ತುವಾಹನ, ಸಂತಸ ದೈವಭಕ್ತಿ ಸರ್ವರಿಗೂ ಪ್ರಾಪ್ತಿಯಾಗಲಿ ಎಂದು ರಾಯರಲ್ಲಿ ಪ್ರಾರ್ಥನೆ. ಹಿಂದುಗಳ ನಿಜ ಹೊಸವರ್ಷ ಯುಗಾದಿ ಹಬ್ಬದ ಶುಭಾಷಯಗಳು ಹರಿಃ ಓಂ ಎಂದು ಪೋಸ್ಟ್ ಮಾಡಿದ್ದಾರೆ.

https://www.instagram.com/p/CNkzuKpsE6o/?utm_source=ig_web_copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss