ಆರೋಗ್ಯ ಸೇವೆಗಳ ಮೇಲಿನ ಜಿಎಸ್‌ಟಿ ಹಿಂಪಡೆಯುವಂತೆ ಕೇಂದ್ರ ಹಣಕಾಸು ಸಚಿವೆಗೆ ಪತ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಶನಿವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದು, ಆರೋಗ್ಯ ಸೇವೆಗಳಿಗೆ ಸರಕು ಮತ್ತು ಸೇವಾ ತೆರಿಗೆಯಿಂದ (ಜಿಎಸ್‌ಟಿ) ವಿನಾಯಿತಿ ನೀಡುವಂತೆ ಮನವಿ ಮಾಡಿದೆ.

ಐಎಂಎಯು ತನ್ನ ಪತ್ರದಲ್ಲಿ, 47 ನೇ ಜಿಎಸ್ಟಿ ಕೌನ್ಸಿಲ್ ಸಭೆಯು ಜೈವಿಕ ವೈದ್ಯಕೀಯ ತ್ಯಾಜ್ಯದ ಸಂಸ್ಕರಣೆ ಅಥವಾ ವಿಲೇವಾರಿಗಾಗಿ ಸಾಮಾನ್ಯ ಜೈವಿಕ-ವೈದ್ಯಕೀಯ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳಿಗೆ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಅನ್ನು ಅನುಮತಿಸಲು 12 ಪ್ರತಿಶತದಷ್ಟು ತೆರಿಗೆ ವಿಧಿಸಲು ಶಿಫಾರಸ್ಸು ಮಾಡಿದೆ. ಈ ಸೌಲಭ್ಯಗಳು ಈ ಹಿಂದೆ ಜಿಎಸ್‌ಟಿ ವಿನಾಯಿತಿ ವಿಭಾಗದಲ್ಲಿದ್ದವು. ಆದರೆ ಈಗ ಜುಲೈ 18 ರ ನಂತರ ಅವುಗಳಿಗೆ ತೆರಿಗೆ ವಿಧಿಸಲಾಗಿದೆ. ಅಲ್ಲದೇ ಐಸಿಯು ಹೊರತುಪಡಿಸಿ, ಆಸ್ಪತ್ರೆಯಿಂದ ವಿಧಿಸಲಾಗುವ ಪ್ರತಿ ರೋಗಿಗೆ ದಿನಕ್ಕೆ ರೂ 5,000 ಮೀರಿದ ಕೊಠಡಿ ಬಾಡಿಗೆಗೆ ಐಟಿಸಿ ಇಲ್ಲದೆ ಶೇಕಡಾ 5 ರಷ್ಟು ತೆರಿಗೆ ವಿಧಿಸಲಾಗುವುದು ಎಂದಿದೆ.

ಈ ನಿರ್ಧಾರದಿಂದ ದೇಶದ ಜನರಿಗೆ ಅನ್ಯಾಯವಾಗಿದೆ ಮತ್ತು ಇನ್‌ಪುಟ್ ತೆರಿಗೆ ಕ್ರೆಡಿಟ್‌ಗಳಿಲ್ಲದ ನಿರ್ಧಾರವು ಆರೋಗ್ಯ ವೆಚ್ಚವನ್ನು ಹೆಚ್ಚಿಸಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.”ಆರೋಗ್ಯ ಸೇವೆಗಳ ಮೇಲಿನ ಯಾವುದೇ ಜಿಎಸ್‌ಟಿಯನ್ನು ತಕ್ಷಣವೇ ಹಿಂಪಡೆಯಲು ವೈದ್ಯಕೀಯ ಸಂಸ್ಥೆ ವಿನಂತಿಸುತ್ತದೆ” ಎಂದು ಅದು ಹೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!