ಕಾಶ್ಮೀರಿ ಮುಸ್ಲಿಂ ಸೈನಿಕರಿಂದಲೇ ಪಾಕಿಗಳಿಗೆ ನೆರವು, ಕೊನೆ ಉಸಿರಿನವರೆಗೆ ಹೋರಾಡಿ ದೇಶ ರಕ್ಷಿಸಿದ ಕರ್ನಲ್ ನರೈನ್ ಸಿಂಗ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ ( ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ವಿಶೇಷ)
ನರೈನ್ ಸಿಂಗ್ ಅವರು 1907 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಹೀರಾ ಸಿಂಗ್ ಅವರ ಕುಟುಂಬದಲ್ಲಿ ಜನಿಸಿದರು. ಸಾಂಬಾದ ಬಾಲಕರ ಪ್ರೌಢಶಾಲೆಯಲ್ಲಿ ಅಧ್ಯಯನ ಪೂರ್ಣಗೊಳಿಸಿದ ಬಳಿಕ ಜೆ-ಕೆ ರಾಜ್ಯ ಪಡೆಯ 7ನೇ ಬೆಟಾಲಿಯನ್‌ಗೆ ನಿಯೋಜನೆಗೊಂಡರು.
ನರೈನ್ ಸಿಂಗ್ ಶ್ಲಾಘನೀಯ ಸೈನಿಕ ಕೌಶಲ್ಯ ಹೊಂದಿದ್ದ ವ್ಯಕ್ತಿ, 2 ನೇ ಮಹಾಯುದ್ಧದ ಸಂಧರ್ಭದಲ್ಲಿ ಜಪಾನಿನ ಸೈನ್ಯದೊಂದಿಗೆ ಹೋರಾಡುವಾಗ ಅವರು ತೋರಿದ್ದ ಧೈರ್ಯ ಮತ್ತು ಶೌರ್ಯ ಹಾಗೂ  ಅದಮ್ಯ ನಾಯಕತ್ವದ ಗುಣಗಳನ್ನು ಮೆಚ್ಚಿದ ಬ್ರಿಟಿಷ್ ಅಧಿಕಾರಿಗಳಿಂದ “ಆರ್ಡರ್ ಆಫ್ ಬ್ರಿಟಿಷ್ ಎಂಪೈರ್” ಪುರಸ್ಕಾರವನ್ನು ಪಡೆದರು. 1947 ರ ಹೊತ್ತಿಗೆ, 25 ವರ್ಷಗಳಿಗೂ ಹೆಚ್ಚು ಕಾಲ ನಿರಂತರವಾಗಿ ತನ್ನ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ್ದ ಅವರಿಗೆ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಬಡ್ತಿ ನೀಡಲಾಯಿತು. ಅಕ್ಟೋಬರ್ 1947 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮೇಲೆ ಪಾಕಿಸ್ತಾನದ ಆಕ್ರಮಣದ ಸಮಯದಲ್ಲಿ, ನರೈನ್ ಸಿಂಗ್ ಜಮ್ಮು ಕಾಶ್ಮೀರದ 4 ನೇ  ಬೆಟಾಲಿಯನ್‌ನ ಕಮಾಂಡರ್ ಆಗಿದ್ದರು. ಇದು J & K ರಾಜ್ಯ ಪಡೆಯ ಅತ್ಯಂತ ಹಳೆಯ ಬೆಟಾಲಿಯನ್ ಆಗಿದ್ದು, ಇದನ್ನು ‘ಫತೇ ಶಿಬ್ಜಿ’ ಎಂದು ಕರೆಯಲಾಗುತ್ತದೆ. ಇದು ನಾಲ್ಕು ಕಂಪನಿಗಳನ್ನು ಒಳಗೊಂಡಿತ್ತು, ಅವುಗಳಲ್ಲಿ ಎರಡು ಡೋಗ್ರಾಸ್ ಗಳದ್ದು ಮತ್ತು  ಎರಡು ಮುಸ್ಲಿಮರದ್ದು.
ಮಿರ್ಪುರ್-ಪೂಂಚ್ ಪ್ರದೇಶದ ಅವರ ಬೆಟಾಲಿಯನ್ನಿನ ಮುಸ್ಲಿಂ ಸಿಬ್ಬಂದಿ ಈಗಾಗಲೇ ಭಾರತದ ವಿರುದ್ಧ ಅಸಮಾಧಾನಗೊಂಡಿದ್ದರು. ಮತ್ತು ಗಡಿಯ ಇನ್ನೊಂದು ಭಾಗದಲ್ಲಿ (ಪಾಕ್) ವಾಸಿಸುವ ಅವರ ಸಹ-ಧರ್ಮೀಯರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದರು. ಇಂತಹ ಸೈನಿಕರು ಪಾಕಿಸ್ತಾನಿ ಸೇನೆಯ ಸಹಯೋಗದೊಂದಿಗೆ ವಿಧ್ವಂಸಕ ಕೃತ್ಯಗಳನ್ನೆಸಗುವ ಯೋಜನೆಗಳ ಬಗ್ಗೆ ಗುಪ್ತಚರ ವರದಿಗಳನ್ನು ಪಡೆದಿದ್ದ ಕಾಶ್ಮೀರದ ಮಹಾರಾಜ ಹರಿ ಸಿಂಗ್ ಅವರು ನರೇನ್ ಸಿಂಗ್ ಅವರ ಬೆಟಾಲಿಯನ್ನಿನ ಮುಸ್ಲಿಂ ಸೈನಿಕರ ನಿಷ್ಠೆಯ ಬಗ್ಗೆ ಭಯಪಡುತ್ತಿದ್ದರು. ಆದರೆ ಕರ್ನಲ್ ನಾರಾಯಣ್ ಸಿಂಗ್, ಕಟ್ಟಾ ದೇಶಪ್ರೇಮಿ ಸೈನ್ಯಾಧಿಕಾರಿಯಾಗಿದ್ದು, ಧರ್ಮದ ಆಧಾರದಲ್ಲಿ ಸೈನಿಕರ ನಿಷ್ಠೆಯನ್ನು ಎಂದಿಗೂ ಪ್ರಶ್ನಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸುತ್ತಿದ್ದರು.
ಅವರು ಕಳೆದ ಆರು ವರ್ಷಗಳಿಂದ ರಾಜ್ಯ ಸೇನೆಯ ಮುಸ್ಲಿಂ ಪಡೆಗಳಿಗೆ ಕಮಾಂಡರ್ ಆಗಿದ್ದರಿಂದ ಅವರ ಬೆಟಾಲಿಯನ್‌ನ ಮುಸ್ಲಿಂ ಸೈನಿಕರ ಮೇಲೆ ಕೇಳಿಬಂದ ಆರೋಪಗಳನ್ನು ಅವರು ಸ್ಪಷ್ಟವಾಗಿ ತಿರಸ್ಕರಿಸಿದರು. ಇದಲ್ಲದೆ, 4 ನೇ ಬೆಟಾಲಿಯನ್ ಈ ಹಿಂದಿನಿಂದಲೂ ಹಿಂದೂ-ಮುಸ್ಲಿಂ ಏಕತೆಯ ಅತ್ಯುತ್ತಮ ದಾಖಲೆಯನ್ನು ಹೊಂದಿತ್ತು. ಆದಾಗ್ಯೂ, ಪಾಕಿಸ್ತಾನದ ಕಡೆಗೆ ಧಾರ್ಮಿಕ ಒಲವಿರುವ ಮುಸ್ಲಿಂ ಸಿಬ್ಬಂದಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ನರೈನ್ ಸಿಂಗ್ ಅವರಿಗೆ ಪದೇ ಪದೇ ಎಚ್ಚರಿಕೆ ನೀಡಲಾಗಿತ್ತು.  ಆದರೆ ಈ ವರದಿಗಳನ್ನೇ ನರೈನ್‌ ಸಿಂಗ್‌ ಸ್ಪಷ್ಟವಾಗಿ ತಿರಸ್ಕರಿಸಿದ್ದರು. ಹಾಗೂ ಇದಕ್ಕಾಗಿ ತರುವಾಯ ಭಾರೀ ಬೆಲೆ ತೆರಬೇಕಾಯಿತು.
1947 ರ ಅಕ್ಟೋಬರ್ 22 ರ ಮಧ್ಯರಾತ್ರಿ, ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳಲು ಪಾಕಿಸ್ತಾನವು ‘ಆಪರೇಷನ್ ಗುಲ್ಮಾರ್ಗ್’ ಅನ್ನು ಪ್ರಾರಂಭಿಸಿತು, ಯುದ್ಧ ನಿಲುಗಡೆ ಒಪ್ಪಂದವನ್ನು ಸ್ಪಷ್ಟವಾಗಿ ಉಲ್ಲಂಘಿಸಿ, ಸುಮಾರು 5000 ಬುಡಕಟ್ಟು ದಾಳಿಕೋರರು, ಆಧುನಿಕ  ಶಸ್ತ್ರಸಜ್ಜಿತ ಪಾಕಿ ಸೈನಿಕರು ಪಾಕಿಸ್ತಾನಿ ಅಧಿಕಾರಿಗಳ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ಪ್ರದೇಶದೊಳಕ್ಕೆ ನುಗ್ಗಿದರು. ಇಡೀ ಭಾರತವೇ ನಿದ್ರಿಸುತ್ತಿರುವ ಸಮಯದಲ್ಲಿ ಪಾಕಿ ಪಡೆ ಮುಜಫರಾಬಾದ್ ನಗರದೊಳಕ್ಕೆ ನುಗ್ಗಿತು. ನಂತರದ ಒಂದೆರಡು ಗಂಟೆಗಳಲ್ಲಿ,  ಇಡೀ ನಗರವೇ ನರಕ ಸದೃಷವಾಯ್ತು. ಲೂಟಿ, ಹತ್ಯಾಕಾಂಡ, ಅತ್ಯಾಚಾರ ಮತ್ತು ಅನಾಗರಿಕರಿಂದ ನಿರೀಕ್ಷಿಸಬಹುದಾದ ಎಲ್ಲವು ಕೆಲವೇ ಗಂಟೆಗಳಲ್ಲಿ ನಡೆದುಹೋದವು. ಲೂಟಿ ನಂತರ ಪಟ್ಟಣದ ಬಹುತೇಕ ಮನೆಗಳಿಗೆ ಬೆಂಕಿ ಹಚ್ಚಲಾಯಿತು. ಕಾಶ್ಮೀರವನ್ನು ರಕ್ಷಿಸಲು ಮುಜಫರಾಬಾದ್‌ನ ಗಡಿ ಪ್ರದೇಶಕ್ಕೆ ಸೈನ್ಯ ನುಗ್ಗಿಸಲು ಮಹಾರಾಜ ಹರಿ ಸಿಂಗ್ ಅವರು ನರೈನ್ ಸಿಂಗ್‌ಗೆ ಆದೇಶಿಸಿದರು. ಈ ಸಂದರ್ಭದಲ್ಲಿ ಲೋಹರ್‌ಗಲಿ ಮತ್ತು ರಾಮಕೋಟೆಯಲ್ಲಿ ನೆಲೆಗೊಳಿಸಲಾಗಿದ್ದ ಜೆಎಕೆ 4 ನೇ ಬೆಟಾಲಿಯನ್‌ನ ಮುಸ್ಲಿಂ ಸೈನಿಕರು ತಮ್ಮ ಧಾರ್ಮಿಕ ಮತಾಂಧತೆಯ ನಿಜಬಣ್ಣವನ್ನು ಪ್ರದರ್ಶಿಸಿದರು. ಈ ಸೈನಿಕರು ಶತ್ರು ಪಡೆಯ ತಮ್ಮ ಸಹ-ಧರ್ಮೀಯರೊಂದಿಗೆ ಕೈಜೋಡಿಸುವ ಮೂಲಕ ಕಾಶ್ಮೀರದಲ್ಲಿ ರಕ್ತ ಸಿಕ್ತ ವಿಧ್ವಾಸಕ ಕೃತ್ಯಗಳನ್ನು ಎಸಗಿತು. ಸ್ವತಃ ಹರಿಸಿಂಗ್‌ ಸೈನಿಕರೇ ಪಾಕಿಸ್ತಾನಿ ಆಕ್ರಮಣಕಾರರನ್ನು ಮುಝಾಫರಾಬಾದ್ ಮತ್ತು ಡೊಮೆಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಪೂರ್ವ ನಿಯೋಜಿತ ಸ್ಥಾನಗಳಿಗೆ ಕರೆದೊಯ್ಯುವ ಮೂಲಕ ಅವರ ದಾಳಿ ಲೂಟಿಗೆ ಬೆಂಗಾವಲಾಗಿ ನಿಂತರು. ಈ ಮುಸ್ಲಿಂ ಪಡೆಗಳು ಆಕ್ರಮಣಕಾರರ ಕೆಲಸವನ್ನು ಸುಲಭಗೊಳಿದವು. ಇದರಿಂದಾಗಿ ರಾಜ್ಯ ಪಡೆಗಳ 4ನೇ ಬೆಟಾಲಿಯನ್ ಶತ್ರುಗಳಿಗೆ ಸಾಕಷ್ಟು ಪ್ರತಿರೋಧವನ್ನು ತೋರಲು ಸಾಧ್ಯವಾಗಲಿಲ್ಲ.
ಪರಿಣಾಮವಾಗಿ, ದಾಳಿಕೋರರು ಸುಲಭವಾಗಿ ಮುಜಫರಾಬಾದ್ ಮುಖ್ಯಭಾಗಕ್ಕೆ ತಲುಪಿದರು, ಅಲ್ಲಿ ಲೆಫ್ಟಿನೆಂಟ್ ಕರ್ನಲ್ ನರೇನ್ ಸಿಂಗ್ ಶತೃಗಳಿಗೆ ಪ್ರಭಲ ಪ್ರತಿರೋಧವನ್ನು ನೀಡಿದರು. ತನ್ನ ನಂಬಿಕಸ್ಥ ಸೈನಿಕರ ದ್ರೋಹದಿಂದ ಆಘಾತಕ್ಕೊಳಗಾಗಿದ್ದರೂ, ಅವರು ಎದೆಗುಂದಲಿಲ್ಲ. ಈ ಪ್ರತಿಕೂಲ ಸವಾಲನ್ನು ಎದುರಿಸಲು ಮತ್ತು ಮುಂದೆ ಬರುವ ಅಪಾಯವನ್ನು ಮೀರಿಸಲು ಅವರು ಕಾರ್ಯತಂತ್ರ ರೂಪಿಸಿದರು. ಪಾಕಿಸ್ತಾನಿ ಅನಾಗರಿಕ ಬುಡಕಟ್ಟು ಜನಾಂಗದವರ ದೊಡ್ಡ ಪಡೆಯ ವಿರುದ್ಧ ಹೋರಾಟದಲ್ಲಿ ಸಾವು ನಿಶ್ಚಿತವಾಗಿದ್ದರೂ, ಧೈರ್ಯಶಾಲಿ ಕರ್ನಲ್ ಎಲ್ಲಾ ಭಯವನ್ನು ದೂರವಿಟ್ಟು ಧೈರ್ಯದಿಂದ ಹೋರಾಡಿದರು. ತನ್ನ ಕೆಲವೇ ಕೆಲವು ಡೋಗ್ರಾ ಸೈನಿಕರೊಂದಿಗೆ ಕೊಹಾಲಾ ಪ್ರದೇಶದಲ್ಲಿ ಪ್ರಬಲ ಹೋರಾಟ ಸಂಘಟಿಸಿದರು.
ನರೈನ್ ಸಿಂಗ್ ಒಳಗಿದ್ದ ವೀರ ಯೋಧ, ಮತ್ತು ಚಾಣಾಕ್ಷ್ಯ ಅಧಿಕಾರಿ ಆ ಕ್ಷಣದಲ್ಲಿ ಹೊರಬಂದ. ತನ್ನ ತಾಯ್ನಾಡನ್ನು ಉಳಿಸಲು ನರೈನ್ ಯುದ್ಧಭೂಮಿಯಲ್ಲಿ ಮಹಾನ್ ಶೌರ್ಯವನ್ನು ಪ್ರದರ್ಶಿಸಿದರು. ಅವರು ಧೈರ್ಯದಿಂದ‌ ಸೈನ್ಯದ ಮುಂಭಾಗದಲ್ಲಿ ನಿಂತು  ಹೋರಾಟ ನಡೆಸಿದರು. ಈ ಕದನದಲ್ಲಿ ಅವರು ನಂಬಿಕೆಯಿಟ್ಟಿದ್ದ, ಅವರೇ ಮುನ್ನಡೆಸುತ್ತಿದ್ದ ಮುಸ್ಲಿಂ ಬೆಟಾಲಿಯನ್‌ ನ ಅಧಿಕಾರಿಯೇ ಲೆಫ್ಟಿನೆಂಟ್ ಕರ್ನಲ್ ನರೈನ್‌ ರನ್ನು ಕೊಂದು ಹಾಕಿದನು. ನರೈನ್‌ ಸಿಂಗ್‌ ಅವರದ್ದೇ ಪಡೆಯ ಮತಾಂಧರ ವಿಶ್ವಾಸಘಾತುಕತನಕ್ಕೆ ಪ್ರಾಣತೆತ್ತರು.  ಧೈರ್ಯಶಾಲಿ ಕರ್ನಲ್ ರಾಷ್ಟ್ರ ಸೇವೆ ಮಾಡುತ್ತಲೇ ಹುತಾತ್ಮರಾದರು. ಅವರ ಧೀರ ಪ್ರತಿಕ್ರಿ ಯೆಯು ಇಡೀ ದಿನ ಶತ್ರುಗಳ ಪಡೆಗಳನ್ನು ಮುಜಾಫರ ನಗರ ದಾಟಿ ಬರದಂತೆ ಮಾಡಿತ್ತು,. ಇದರಿಂದಾಗಿ ಮುಂದಿನ ಕ್ರಮಕ್ಕಾಗಿ ಕಾರ್ಯತಂತ್ರವನ್ನು ಯೋಜಿಸಲು ಶ್ರೀನಗರದ ಪ್ರಧಾನ ಕಛೇರಿಯಲ್ಲಿ ನಿಯೋಜಿಸಲಾದ ರಾಜ್ಯ ಪಡೆಗಳಿಗೆ ಸಾಕಷ್ಟು ಸಮಯವನ್ನು ಒದಗಿಸಿತು. ಅಂತಿಮವಾಗಿ ಭಾರತೀಯ ಪಡೆಗಳು ಆಗಮಿಸಿ ಪಾಕಿ ಸೈನ್ಯವನ್ನು ಧೂಳಿಪಟ ಮಾಡಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!