MUST READ | ಜೀವನದಿಂದ ಈ ನಿರೀಕ್ಷೆಗಳನ್ನು ಮಾಡುತ್ತಾ ಕೂತಿದ್ರೆ ಲೈಫ್ ಹಾಳಾಗೋದು ಗ್ಯಾರೆಂಟಿ!

ಜೀವನದಲ್ಲಿ ಇನ್ನೇನಿದೆ? ಎಲ್ಲಾ ನಿರೀಕ್ಷೆಗಳೇ ಅಲ್ವಾ? ರಿಯಾಲಿಟಿಯಿಂದ ನಿಮ್ಮನ್ನು ದೂರ ಇಡೋದು, ನೋವು ಕೊಡೋದು, ಕಣ್ಣೀರು ತರಿಸೋದು ಎಲ್ಲವೂ ನಿರೀಕ್ಷೆಗಳದ್ದೇ ತಪ್ಪು.. ಖಂಡಿತಾ ಅಲ್ಲ, ತಪ್ಪು ನಿಮ್ಮದು, ಅನ್‌ರಿಯಾಲಿಸ್ಟಿಕ್ ಆದ ನಿರೀಕ್ಷೆಗಳನ್ನು ಇಟ್ಟುಕೊಂಡು ಕಾಯುತ್ತಾ ಕೂರೋದು ಎಲ್ಲಕ್ಕಿಂತ ದೊಡ್ಡ ತಪ್ಪಾಗುತ್ತದೆ..

ಜೀವನದಿಂದ ಈ ರೀತಿ ನಿರೀಕ್ಷೆ ಇಟ್ಟುಕೊಂಡು ಕಾಯುತ್ತಾ ಕೂತರೆ ಇಲ್ಲಿ ತಪ್ಪು ನಿಮ್ಮದೇ..

  • ಜೀವನದಲ್ಲಿ ಎಲ್ಲಾ ನ್ಯಾಯಯುತವಾಗಿರಬೇಕು, ಯಾರಿಗೂ ಮೋಸ ಆಗಬಾರದು, ಸ್ಕ್ಯಾಮ್ ಇರಬಾರದು, ದೇವರು ಯಾರಿಗೂ ಮೋಸ ಆಗದಂತೆ ನೋಡಿಕೊಳ್ಳಬೇಕು. ಜೀವನ ಎಲ್ಲಾರಿಗೂ ಒಂದೇ ರೀತಿ ಇರೋಕೆ ಸಾಧ್ಯವಾ? ಸಿಕ್ಕಾಪಟ್ಟೆ ಚೆನ್ನಾಗಿ ಕೆಲಸ ಮಾಡುವ ನಿಮಗಿಂತ ಈಗ ಬಂದ ನಿಮ್ಮ ಜ್ಯೂನಿಯರ್‌ಗೆ ಹೆಚ್ಚು ಸಂಬಳ ಇರಬಹುದು ನನಗೆ ಯಾಕೆ ಹೀಗಾಗ್ತಿದೆ, ಇದು ನ್ಯಾಯ ಅಲ್ಲ ಅನ್ನೋದು ಸರೀನಾ?
  • ಅವಕಾಶಗಳು ಬಂದು ನಮ್ಮ ಮನೆ ಮುಂದೆ ಬೀಳುತ್ತವೆ ಅನ್ನೋ ನಿರೀಕ್ಷೆ ಇಟ್ಟುಕೊಳ್ಳಬೇಡಿ, ನೀವು ಎಷ್ಟೇ ಟ್ಯಾಲೆಂಟೆಡ್ ಆಗಿದ್ದರೂ, ಅವಕಾಶವನ್ನು ನೀವು ಅರಸಿ ಹೋಗಲೇಬೇಕು. ಇಲ್ಲ ಮನೆಯಲ್ಲಿಯೇ ಇರುತ್ತೀರಿ. ನಾನು ಸುಂದರವಾಗಿದ್ದೇನೆ, ನನಗೆ ಸಿನಿಮಾ ಆಫರ್ ಬರುತ್ತದೆ ಎಂದು ಕಾದು ಕೂತರೆ? ಆಡಿಷನ್ ಕೊಡೋಕೆ ಹೊರಗೆ ಹೋಗಬೇಕಲ್ವಾ?
  • ನನ್ನ ಥರಾನೇ ಎಲ್ಲಾರೂ ಇರಬೇಕು ಅನ್ನೋ ಆಸೆ ಬಿಟ್ಟುಬಿಡಿ, ನನ್ನ ಥರ ಆಲೋಚನೆ ಮಾಡಬೇಕು, ನಾನು ಹೇಳಿದ್ದೇ ಆಗಬೇಕು, ನಾನು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕು, ನಾನೇ ಬೆಸ್ಟ್ ಎನ್ನುವ ಭಾವನೆ ಹಿಡಿತದಲ್ಲಿರಲಿ.
  • ನಾನು ಹೇಳಿದ್ದಕ್ಕೆಲ್ಲಾ ಜಗತ್ತೇ ಒಕೆ ಅನ್ನಬೇಕು. ಅಲ್ವಾ? ನಾನು ಯಾವಾಗ್ಲೂ ಸರಿ, ಹಾಗಾಗಿ ಎಲ್ಲರೂ ನನ್ನ ಮಾತನ್ನು ಕೇಳಬೇಕು, ಕೇಳದಿದ್ದರೆ ಬೇಸರ ಮಾಡಿಕೊಳ್ಳೋದರಿಂದ ಏನೂ ಸಾಧ್ಯವಾಗೋದಿಲ್ಲ ನೆನಪಿರಲಿ.
  • ನಾನು ಜಗತ್ತನ್ನು ಬದಲಾಯಿಸ್ತೀನಿ, ಜಗತ್ತು ಆಗದಿದ್ರೂ ಸುತ್ತಮುತ್ತಲಿನ ವಾತಾವರಣವನ್ನು ಬದಲಾಯಿಸ್ತೀನಿ. ನಾನು ಕಸ ರಸ್ತೆಗೆ ಎಸೆಯೋದಿಲ್ಲ, ಅಲ್ಲೇ ನಿಂತು ಯಾರ‍್ಯಾರು ಕಸ ಎಸೆಯುತ್ತಾರೋ ಅವರಿಗೆ ಕಸ ಯಾಕೆ ಎಸೆಯಬಾರದು ಎಂದು ಹೇಳ್ತೇನೆ ಎಂದರೆ ಇದು ಸಾಧ್ಯವಾ?
  • ನಾನು ಅವಳನ್ನ/ ಅವನನ್ನ ನನ್ನಂತೆ ಅಥವಾ ನನಗೆ ಬೇಕಾದಂತೆ ಬದಲಾಯಿಸುತ್ತೇನೆ ಎನ್ನೋದು ಮೂರ್ಖತನವೇ ಸರಿ. ಅವರಂತೆ ನೀವು ಬದಲಾಗ್ತೀರಾ? ಸಂಪೂರ್ಣವಾಗಿ? ಆಗೋದಿಲ್ಲ ಅಲ್ವಾ? ಹಾಗೆ ಅವರಿಗೂ ನಿಮ್ಮಂತೆ, ನಿಮಗೆ ಬೇಕಾದಂತೆ ಬದಲಾಗೋಕೆ ಆಗೋದಿಲ್ಲ. ಇರೋದನ್ನು ಒಪ್ಪಿಕೊಳ್ಳುವವನೇ ಜಾಣ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!