ಕತ್ರಿನಾ-ವಿಕ್ಕಿ ಕೌಶಲ್​ಗೆ ಜೀವ ಬೆದರಿಕೆ: ಬಂಧಿತನಿಂದ ಕಾರಣ ಕೇಳಿ ಶಾಕ್ ಆದ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಬಾಲಿವುಡ್ ನಟಿ ಕತ್ರಿನಾ ಕೈಫ್​ ಮತ್ತು ಅವರ ಪತಿ ವಿಕ್ಕಿ ಕೌಶಲ್​ಗೆ ಜೀವಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇದೀಗ ಕಾರಣವನ್ನು ಬಹಿರಂಗಪಡಿಸಿದ್ದಾರೆ.
ಮನ್ವಿಂದರ್ ಸಿಂಗ್​ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಈತ ಬಾಲಿವುಡ್​ನಲ್ಲಿ ಈಗಷ್ಟೇ ಸಣ್ಣ ಪುಟ್ಟ ಪಾತ್ರದಲ್ಲಿ ನಟಿಸಿದ್ದು, ಕತ್ರಿನಾ ಕೈಫ್​ ಅವರ ದೊಡ್ಡ ಅಭಿಮಾನಿ, ಈತ ಕತ್ರಿನಾಳನ್ನು ಮದುವೆಯಾಗಲು ಬಯಸಿದ್ದನಂತೆ ಇದಕ್ಕಾಗಿಯೇ ಕಳೆದ ಕೆಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬೇರೆ ಹೆಸರಿನಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್​ಸ್ಟಾಗ್ರಾಂನ ಈತನ ಖಾತೆಯಲ್ಲಿ ಈ ವ್ಯಕ್ತಿ ತನ್ನ ಹೆಸರನ್ನು ಕಿಂಗ್​ ಆದಿತ್ಯ ರಾಜಪೂತ್​ ಎಂದು ಬರೆದುಕೊಂಡಿದ್ದಾನೆ. ತನ್ನನ್ನು ತಾನು ನಟ ಎಂದು ಹೇಳಿಕೊಂಡಿದ್ದು, ನನ್ನ ಗೆಳತಿ ಹೆಂಡತಿ ಕತ್ರಿನಾ ಕೈಫ್​ ಎಂದೂ ಬರೆದುಕೊಂಡಿದ್ದಲ್ಲದೇ ಕತ್ರಿನಾಳ ಅಧಿಕೃತ ಐಡಿಗೂ ಟ್ಯಾಗ್​ ಮಾಡಿದ್ದ. ಸದ್ಯ ಈತನನ್ನು ಇನ್ನೂ ವಿಚಾರಣೆಗೊಳಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬನಿಂದ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ವಿಕ್ಕಿ ಕೌಶಲ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಇದಾದ ಬಳಿಕ ದೂರು ದಾಖಲಾದ ಬೆನ್ನಲ್ಲೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!