ಹೊಸದಿಗಂತ ವರದಿ, ಗೋಕರ್ಣ:
ಗೋಕರ್ಣ ಮುಖ್ಯ ಕಡಲ ತೀರದಲ್ಲಿ ಅಲೆಗಳ ಸುಳಿಗೆ ಸಿಲುಕಿದ್ದ ಇಬ್ಬರನ್ನು ಜೀವರಕ್ಷಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಕೊಪ್ಪಳ ಜಿಲ್ಲೆಯ ಪ್ರದೀಪ್ (19) ಮತ್ತು ಕಿರಣ್ (21) ರಕ್ಷಣೆಗೊಳಗಾದವರಾಗಿದ್ದಾರೆ.
ಕೊಪ್ಪಳದಿಂದ 15 ಜನರ ತಂಡ ಪ್ರವಾಸಕ್ಕೆ ಬಂದಿದ್ದು ಗೋಕರ್ಣ ಮುಖ್ಯ ಕಡಲತೀರದಲ್ಲಿ ಈಜಾಡುವಾಗ ಇಬ್ಬರು ಸುಳಿಗೆ ಸಿಲುಕಿ ಕೊಚ್ಚಿ ಹೋಗುತ್ತಿದ್ದರು
ತಕ್ಷಣ ಕಾರ್ಯಪೃವೃತ್ತರಾದ ಲೈಪ್ ಗಾರ್ಡ ಗಳಾದ ಮಾರುತಿ,ವಿಶ್ವಾಸ್, ರಾಜು ಅಂಬಿಗ ,ಪ್ರವಾಸಿ ಮಿತ್ರ ಗಾರ್ಡ ಶೇಖರ ಹರಿಕಾಂತ್ ರಕ್ಷಣಾ ಕಾರ್ಯಾಚರಣೆ ಮಾಡಿದ್ದಾರೆ.