Saturday, August 13, 2022

Latest Posts

ದೆಹಲಿಯಲ್ಲಿ ‘ಅತ್ಯಂತ ಕಳಪೆ’ ಗುಣಮಟ್ಟದ ಗಾಳಿಯಿಂದ ಬೆಳಕಿನ ಹಬ್ಬ ಆರಂಭ: ಇನ್ನೆರಡು ದಿನದಲ್ಲಿ ಏನಾಗಲಿದೆ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಗಾಳಿಯೊಂದಿಗೆ ದೀಪಾವಳಿ ಸಂಭ್ರಮ ಆರಂಭವಾಗಿದೆ.
ಬೆಳಕಿನ ಹಬ್ಬದ ಸಡಗರ ಮುಗಿಯುವ ಸಮಯಕ್ಕೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ರಾಷ್ಟ್ರ ರಾಜಧಾನಿಯಲ್ಲಿ ಈಗಾಗಲೇ ವಾಯುಮಾಲೀನ್ಯ ಹೆಚ್ಚಿದೆ. ಇದನ್ನು ಮರೆತು ದೆಹಲಿ ಜನತೆ ಪಟಾಕಿ ಸಿಡಿಸುತ್ತಿರುವುದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ.
ಬುಧವಾರ ಸಂಜೆ ದೆಹಲಿಯ ವಾಯುಗುಣಮಟ್ಟ ಎಕ್ಯೂಐ 314ರಷ್ಟಿತ್ತು. ಆದರೆ ಇಂದು ಬೆಳಗ್ಗೆ ಇದು 341ಕ್ಕೆ ಏರಿಕೆಯಾಗಿದೆ.
ಈ ಸೂಚ್ಯಂಕವು ಅತ್ಯಂತ ಕಳಪೆ ಮಟ್ಟದ ಗಾಳಿಯನ್ನು ಸೂಚಿಸುತ್ತಿದೆ. ನಾಳೆ ಮತ್ತು ನಾಡಿದ್ದು ಹಬ್ಬದ ಸಂಭ್ರಮ ಜೋರಾಗಿಯೇ ಇದ್ದು, ಈ ವೇಳೆ ಪಟಾಕಿ ಸಿಡಿಸಿದರೆ ಗಾಳಿಯ ಗುಣಮಟ್ಟ ಅತ್ಯಂತ ತೀವ್ರ ಕಳಪೆ ಮಟ್ಟ ತಲುಪಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss