ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಕಲಬುರಗಿ:
ಕಳೆದೊಂದು ವಾರದಿಂದ ವರುಣ ಅಬ್ಬರಿಸುತ್ತಿದ್ದು, ಕಮಲಾಪೂರ ತಾಲೂಕಿನ ಬೆಳಕೋಟಾ ಗಂಡೋರಿ ನಾಲಾ ಜಲಾಶಯ ಬಹುತೇಖ ಭರ್ತಿಯಾಗಿದೆ.
ಜಲಾಶಯದಿಂದ ನೀರು ಹೊರಬೀಡಲಾಗುತ್ತಿದ್ದು, ಗ್ರಾಮಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ. ಗಂಡೋರಿ ನಾಲಾ ಜಲಾಶಯದ ಗರಿಷ್ಠಮಟ್ಟ 467.00 ಮೀಟರ್ ಇದ್ದು, ಸದ್ಯದ ನೀರಿನ ಮಟ್ಟ 465.40 ಮೀಟರ್ ಇದೆ. ಜಲಾಶಯ ಬಹುತೇಖ ಬರ್ತಿಯಾದ ಪರಿಣಾಮ ಎಂಟು ಕ್ರಸ್ಟ್ ಗೇಟ್ಗಳ ಮೂಲಕ 600 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ.
ನೀರು ಹೊರ ಹರಿವು ಹೆಚ್ಚಿದರಿಂದ ಜಲಾಶಯದ ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ಜಮೀನುಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.
ಜಲಾಶಯದ ಸುತ್ತಮುತ್ತಲಿನ ಗ್ರಾಮಗಳ ಜನ ಎಚ್ಚರಿಕೆಯಿಂದರಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.