ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………
ಹೊಸ ದಿಗಂತ ವರದಿ, ಮಂಗಳೂರು:
ಭಾರಿ ಮಳೆಗೆ ನಗರದ ಗುಜ್ಜರೆಕೆರೆ ಅರೆಕೆರೆ ಬೈಲು ಎಂಬಲ್ಲಿ ಮ್ಯಾನ್ಹೋಲ್ನಿಂದ ಕೊಳಚೆ ನೀರು ಸೋಮವಾರ ಕಾರಂಜಿಯಂತೆ ಚಿಮ್ಮಿದೆ.
ಭಾರಿ ಮಳೆಯಿಂದ ಮಂಗಳೂರಿನ ಗುಜ್ಜರಕೆರೆ ಅರೆಕೆರೆ ಬೈಲು ಎಂಬಲ್ಲಿ ಮ್ಯಾನ್ಹೋಲ್ನಿಂದ ಕೊಳಚೆ ನೀರು ಉಕ್ಕಿ ಹರಿದಿದ್ದು, ಮನೆಗಳಿಗೆ ನುಗ್ಗಿದೆ. ಸ್ಥಳೀಯ ಮನೆಗಳ ಅಂಗಳದಲ್ಲಿ ಶೇಖರಣೆಗೊಂಡಿದೆ. ಇದರಿಂದಾಗಿ ಸ್ಥಳೀಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಒಳಚರಂಡಿ ತುಂಬಿ ಮ್ಯಾನ್ಹೋಲ್ ಮುಚ್ಚಳ ಹಾರಿ ನೀರು ಕಾರಂಜಿಯಂತೆ ಹರಿಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
‘ಇದು ಹಲವಾರು ವರ್ಷಗಳ ಸಮಸ್ಯೆ. ಪ್ರತಿ ಬಾರಿ ಇಲ್ಲಿ ಸಮಸ್ಯೆ ಸೃಷ್ಟಿಯಾದಾಗ ಜನಪ್ರತಿನಿಧಿಗಳು, ಅಧಿಕಾರಿಗಳು ಆಗಮಿಸಿ ಭರವಸೆ ನೀಡಿ ತೆರಳುವುದು ಸಂಪ್ರದಾಯವಾಗಿದೆ. ಪ್ರಸ್ತುತ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಜನತೆಗೆ ರೋಗಭೀತಿ ಎದುರಾಗಿದೆ. ಇನ್ನಾದರೂ ಇಲ್ಲಿನ ಅಸಮರ್ಪಕ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರಾದ ನೇಮು ಕೊಟ್ಟಾರಿ ಒತ್ತಾಯಿಸಿದ್ದಾರೆ.