ಹೊಸದಿಗಂತ ವರದಿ, ಮೈಸೂರು:
ನಗರದ ಲಿಂಗಾಬುದಿ ಕೆರೆಯ ನೀರು ಹರಿದು ಹೋಗುವ ತೂಬುಗಳು ಬಂದ್ ಆಗಿವೆ.
ಲೇಔಟ್ ನಿರ್ಮಾಣಕ್ಕಾಗಿ ಲಿಂಗಾಬುದಿ ಕೆರೆ ನೀರು ಹೋಗುವ ತೂಬುಗಳನ್ನು ಮುಚ್ಚಿ ಹಾಕಲಾಗಿದೆ. ಕಾಂಕ್ರೀಟ್ ನಿಂದಾಗಿ ಲಿಂಗಾಬುದಿ ಕೆರೆ ಏರಿಯ ಎರಡು ತೂಬುಗಳ ಬಂದ್ ಆಗಿದ್ದು, ಕೆರೆಯಿಂದ ನೀರು ಹೊರಹೋಗಲಾಗದೆ ಏರಿ ಒಡೆಯುವ ಭೀತಿ ಉಂಟಾಗಿದೆ.
ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಲಿಂಗಾAಬುದಿಕೆರೆ ಸಂಪೂರ್ಣ ಭರ್ತಿಯಾಗದ್ದು, ಹೆಚ್ಚುವರಿ ನೀರು ಹೊರಹೋಗುವ ಕೋಡಿ ಭಾಗವೂ ಬಂದ್ ಆಗಿರುವುದರಿಂದಾಗಿ, ಕೆರೆಯಿಂದ ನೀರು ಹೊರಹೋಗಲಾಗದೆ ಏರಿ ಒಡೆಯುವ ಭೀತಿ ಎದುರಾಗಿದೆ. ಇನ್ನು ಈ ವಿಚಾರ ಅಧಿಕಾರಿಗಳ ಗಮನಕ್ಕೆ ಬಂದರೂ ಸಹ ಸಮಸ್ಯೆ ಬಗೆಹರಿಸದೆ ಸುಮ್ಮನಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.