ಫೈನಲಸೀಮಾ ಕಪ್‌ ಗೆದ್ದು ಫೀಫಾ ವಿಶ್ವಕಪ್‌ಗೆ ಅರ್ಹತೆ ಸಂಪಾದಿಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಅರ್ಜೆಂಟೀನಾ ಫುಟ್ಬಾಲ್‌ ತಂಡ ಇತ್ತೀಚಿನ ದಿನಗಳಲ್ಲಿ ಅದ್ಭುತ ಲಯದಲ್ಲಿದೆ. 2021 ರಲ್ಲಿ ಬರೋಬ್ಬರಿ 28 ವರ್ಷಗಳ ಕಾಯುವಿಕೆಯ ಬಳಿಕ ಕೋಪಾ ಅಮೇರಿಕಾ ಟೂರ್ನಿ ಗೆದ್ದು ಚಿನ್ನದ ಹೊಳಪಿನಲ್ಲಿರುವ ತಂಡವು ತನ್ನ ಗೆಲುವಿನ ಓಟವನ್ನು ವಿಸ್ತರಿಸಿದ್ದು, ಇದೀಗ ಫೈನಲಸೀಮಾ ಟೂರ್ನಿಯನ್ನು ಗೆಲ್ಲುವ ಮೂಲಕ ಮುಂದಿನ ವಿಶ್ವಕಪ್‌ಗೆ ಅರ್ಹತೆ ಪಡೆದು ಮತ್ತೊಂದು ಸ್ಮರಣೀಯ ಕ್ಷಣವನ್ನು ಸಂಭ್ರಮಿಸುತ್ತಿದೆ.
ಲಂಡನ್‌ ನ ವೆಂಬ್ಲಿಯಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿದ ಲಿಯೋನೆಲ್ ಮೆಸ್ಸಿ ಪಡೆ ಯುರೋಪಿಯನ್ ಚಾಂಪಿಯನ್ ಇಟಲಿ ವಿರುದ್ಧ 3-0 ಅಂತರ ಏಕಪಕ್ಷೀಯ ಗೆಲುವು ಸಾಧಿಸುವ ಮೂಲಕ ಫೈನಲಸೀಮಾ ಟೂರ್ನಿಯ ಚಾಂಪಿಯನ್‌ ಆಗಿದೆ. 7 ಬಾರಿಯ ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ವಿಜೇತ ಮೆಸ್ಸಿಗೆ ಇದು ಎರಡನೇ ಅಂತರಾಷ್ಟ್ರೀಯ ಪ್ರಶಸ್ತಿಯಾಗಿದ್ದು, ಈ ಮೂಲಕ ಇಷ್ಟು ವರ್ಷ ಕಾಡುತ್ತಿದ್ದ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದ್ದಾರೆ. ಇದೇ ವರ್ಷ ನಡೆಯಲಿರುವ ಫೀಫಾ ವಿಶ್ವಕಪ್‌ ಜಯಿಸುವತ್ತ ಮೆಸ್ಸಿ ಚಿತ್ತ ನೆಟ್ಟಿದ್ದಾರೆ.
ಪಂದ್ಯದ ಮೊದಲಾರ್ಧದಲ್ಲಿ ಲೌಟಾರೊ ಮಾರ್ಟಿನೆಜ್ ಮತ್ತು ಏಂಜೆಲ್ ಡಿ ಮಾರಿಯಾ ಅವರ ಸ್ಟ್ರೈಕ್‌ಗಳಿಂದ ಇಟಲಿ ವಿರುದ್ಧ 2.0 ಗೋಲುಗಳ ಮುನ್ನಡೆ ಸಾಧಿಸಿದ್ದ ಅರ್ಜೆಂಟೀನಾ, ದ್ವಿತಿಯಾರ್ಧದಲ್ಲಿ ಪೌಲೊ ಡೈಬಾಲಾ ಸಿಡಿಸಿದ ಗೋಲಿನ ಬಲದಿಂದ ಮ್ಯಾನ್ಸಿನಿ ನೇತೃತ್ವದ ಇಟಲಿ ತಂಡವನ್ನು ನಡೆಬಡಿದು ಚಾಂಪಿಯನ್‌ ಪಟ್ಟಕ್ಕೇರಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!