ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಉಡುಪಿ ಜಿಲ್ಲೆಯಲ್ಲಿ ಕಾಡುತ್ತಿದೆ ದ್ರವ ವೈದ್ಯಕೀಯ ಆಮ್ಲಜನಕದ ಕೊರತೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ವರದಿ, ಉಡುಪಿ :

ರಾಜ್ಯದ ಇತರೆ ಕಡೆಗಳಂತೆ ಉಡುಪಿ ಜಿಲ್ಲೆಯಲ್ಲಿಯೂ ದ್ರವ ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರವಾಗಿ ಕಾಡುವುದಕ್ಕೆ ಆರಂಭವಾಗಿದೆ. ದಿನದಿಂದ ದಿನಕ್ಕೆ ಆಮ್ಲಜನಕದ ಬೇಡಿಕೆ ಹೆಚ್ಚುತ್ತಿರುವುದರಿಂದ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನಾಳೆ ಆಮ್ಲಜನಕ ಪೂರೈಕೆಯಾಗದೇ ಇದ್ದರೆ, ಮೇ 5ರಿಂದ ಜಿಲ್ಲೆಯೂ ಆಕ್ಸಿಜನ್ ಕೊರತೆ ಎದುರಿಸಲಿದೆ.
ಹೌದು, ಉಡುಪಿ ಜಿಲ್ಲೆಯ ದ್ರಮ ಆಮ್ಲಜನಕ ಸಾಮರ್ಥ್ಯ 51ಸಾವಿರ ಕಿಲೋ ಲೀಟರ್. ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ 6ಸಾವಿರ ಕಿ.ಲೀ. ಸಾಮರ್ಥ್ಯದ ಸಂಗ್ರಹಾಗಾರವಿದೆ. ಮಣಿಪಾಲ ಕೆಎಂಸಿಯಲ್ಲಿ 20ಸಾವಿರ ಕಿ.ಲೀ. ಸಾಮರ್ಥ್ಯದ ಸಂಗ್ರಹಾಗಾರವಿದೆ. ಇತ್ತೀಚೆಗೆ ಬೆಳಪುವಿನಲ್ಲಿ ಖಾಸಗಿಯಾಗಿ 25ಸಾವಿರ ಕಿ.ಲೀ. ಸಾಮರ್ಥ್ಯದ ಸಂಗ್ರಹಾಗಾರ ಪ್ರಾರಂಭವಾಗಿದೆ. ಎಲ್ಲವೂ ರಿಫಿಲ್ಲಿಂಗ್ ಘಟಕಗಳಾಗಿವೆ. ಹಾಗಾಗಿ ಬೇಡಿಕೆ ಮತ್ತು ಸರಬರಾಜಿನಲ್ಲಿ ವ್ಯತ್ಯಾಸವಿರುವುದರಿಂದ ಆಮ್ಲಜನಕದ ಕೊರತೆ ಉಂಟಾಗುತ್ತಿದೆ.
ಬೆಳಪು-ಕಾರ್ನಾಡಿನಿಂದ ರಿಫಿಲ್ಲಿಂಗ್
ಜಿಲ್ಲಾಸ್ಪತ್ರೆ ಮತ್ತು ಮಣಿಪಾಲ ಕೆಎಂಸಿ ಆಸ್ಪತ್ರೆ ಹೊರತುಪಡಿಸಿದರೆ, ಜಿಲ್ಲೆಯ ಉಳಿದೆಲ್ಲ ಆಸ್ಪತ್ರೆಗಳಿಗೂ ಸಿಲಿಂಡರ್ ಮೂಲಕವೇ ದ್ರವ ಆಮ್ಲಜನಕದ ಪೂರೈಕೆಯಾಗಬೇಕಿದೆ. ಸರಕಾರಿ ವ್ಯವಸ್ಥೆಯಲ್ಲಿ 140 ಜಂಬೋ ಸಿಲಿಂಡರ್‌ಗಳಿವೆ. ಖಾಸಗಿ ಆಸ್ಪತ್ರೆಗಳು ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದು, ಒಟ್ಟು 350-380 ಸಿಲಿಂಡರ್ ಆಕ್ಸಿಜನ್ ಅವಶ್ಯಕತೆಯಿದೆ. ಈ ಸಿಲಿಂಡರ್‌ಗಳನ್ನು ಬೆಳಪು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಕಾರ್ನಾಡಿನಲ್ಲಿರುವ ರಿಫಿಲ್ಲಿಂಗ್ ಘಟಕಗಳಲ್ಲಿ ಆಕ್ಸಿಜನ್ ತುಂಬಿಸಿ, ಬಳಸಲಾಗುತ್ತಿದೆ.
ಪ್ರತಿದಿನ 6ಟನ್ ಆಕ್ಸಿಜನ್ ಬೇಡಿಕೆ
ಸದ್ಯ ಉಡುಪಿ ಜಿಲ್ಲೆಯಲ್ಲೀಗ ಆರು ಟನ್ ಆಕ್ಸಿಜನ್ ಅವಶ್ಯವಿದೆ. ಒಂದು ವಾರದ ಹಿಂದೆ ಇದು 3-4 ಟನ್ ಆಗಿತ್ತು. ಇದೀಗ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಚಿಕಿತ್ಸೆಗೆ ಹ್ಲೈೆ ಆಕ್ಸಿಜನ್ ಬೇಡುತ್ತಿದೆ. ಇದರಿಂದ ಪೂರೈಕೆಯಾದರಷ್ಟೇ ಚಿಕಿತ್ಸೆ ಎಂಬಂತಾಗಿದೆ. ಉಡುಪಿ ಜಿಲ್ಲೆಗೆ ಭಾನುವಾರ 10 ಟನ್ ಆಕ್ಸಿಜನ್ ಸರಬರಾಜು ಆಗಿದೆ. ಮಂಗಳವಾರದವರೆಗೆ ಒದಗಿಸುವುದಕ್ಕೆ ಸಮಸ್ಯೆ ಇಲ್ಲ. ಮಂಗಳವಾರ ಸಂಜೆಯೊಳಗೆ ಆಕ್ಸಿಜನ್ ಸರಬರಾಜು ಆಗಬೇಕಿದೆ.
ಎರಡು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಕೂಡ ಜಿಲ್ಲೆಗೆ ಆಕ್ಸಿಜನ್ ಸರಬರಾಜಿಗೆ ಪ್ರತ್ಯೇಕ ಟ್ಯಾಂಕರ್ ವ್ಯವಸ್ಥೆಗೆ ಅಧಿಕಾರಿಗಳಲ್ಲಿ ಮಾತನಾಡುವುದಾಗಿ ತಿಳಿಸಿದ್ದರು. ಇದೀಗ ದ್ರವ ಆಮ್ಲಜನಕದ ವ್ಯವಸ್ಥೆಯಾದರೂ ಅದನ್ನು ಸರಬರಾಜು ಮಾಡುವುದಕ್ಕೆ ಟ್ಯಾಂಕರ್ ವ್ಯವಸ್ಥೆ ಇಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಸರಕಾರ ಉಡುಪಿಯತ್ತಲೂ ಗಮನಹರಿಸಬೇಕಾದ ಆವಶ್ಯಕತೆಯಿದೆ. ಇಲ್ಲದಿದ್ದರೆ ಒಂದು ವರ್ಷದಲ್ಲಿ 201ರಷ್ಟಿರುವ ಮೃತರ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಅಪಾಯ ಮತ್ತು ಆತಂಕವಿದೆ.
ಹಾಸಿಗೆ ಸಿಗದೇ ನರಳಾಡಿದ ಮಹಿಳೆ!
ಸೋಮವಾರ ಉಡುಪಿಯಲ್ಲಿ ಕೋವಿಡ್ ಸೋಂಕಿತ ಮಹಿಳೆಯೊಬ್ಬರು ಹಾಸಿಗೆ ಸಿಗದೇ ನರಳಾಡಿದ ಘಟನೆ ವರದಿಯಾಗಿದೆ. ಸೋಂಕು ದೃಢಪಟ್ಟ ಮಹಿಳೆ ಮಧ್ಯಾಹ್ನ 3ಗಂಟೆಯಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತಿರುಗುತ್ತಿದ್ದರು, ಸಂಜೆ 6ಗಂಟೆಗೆ ಆಸ್ಪತ್ರೆಯ ಸಿಬ್ಬಂದಿ ಸೋಂಕಿತೆಯನ್ನು ಕರೆದುಕೊಂಡು ಹೋಗಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ಎಲ್ಲ 10 ಐಸಿಯು ಹಾಸಿಗೆಗಳು ಭರ್ತಿಯಾಗಿದ್ದು, ಇದರಿಂದ ಹೆಚ್ಚಿನ ಸೌಲಭ್ಯ ಬೇಕಾದ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆ ಎದುರಾಗಿದೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss